karaga 
ಜಿಲ್ಲೆ

ಕೊನಘಟ್ಟ ಕರಗ ಮಹೋತ್ಸವ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕೊನಘಟ್ಟದ ಐತಿಹಾಸಿಕ ಪ್ರಸಿದ್ಧ ಶ್ರೀದ್ರೌಪದಮ್ಮನವರ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ಬಾರಿ ಕರಗ ಹೊತ್ತ ಪ್ರಕಾಶ್ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಕರಗ ಹೊತ್ತು ಮನೆಗಳ ಬಳಿ ಬಂದಾಗ ಮಹಿಳೆಯರು ಕರಗಕ್ಕೆ ಆರತಿ ಎತ್ತಿ ಪೂಜೆ ನೆರವೇರಿಸಿದರು.
ಗ್ರಾಮ ದೇವತೆ ಹಾಗೂ ಗ್ರಾಮದ ಇತರ ದೇವರುಗಳಿಗೆ ವಿಶೇಷ ಪೂಜೆ ನಡೆಯಿತು. ಜನತೆ ಹೂವಿನ ಕರಗ ಮಹೋತ್ಸವದ ಹಿಂದಿನ ದಿನ ದ್ರೌಪತಮ್ಮನವರ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಕರಗವು ದೇವಾಲಯದಿಂದ ಭಾನುವಾರ ರಾತ್ರಿ ಸುಮಾರು 10.40ರ ಸಮಯದಲ್ಲಿ ಹೊರಬರುತ್ತಿದ್ದಂತೆ ಭಕ್ತರೆಲ್ಲರೂ ಹರ್ಷದಿಂದ ಕರಗಕ್ಕೆ ನಮಸ್ಕರಿಸಿದರು. ನಂತರ ಕರಗ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡು ದೇವಾಲಯದ ಸುತ್ತ ನೃತ್ಯಮಾಡುತ್ತ, ಕುಮಾರ ಮಕ್ಕಳ ಗೋವಿಂದ ಗೋವಿಂದ ಎಂಬ ಘೋಷಣೆ ಕೂಗುತ್ತಾ ಕರಗವು ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡುತ್ತಾ ಸಂಚರಿಸಿತು. ನಂತರ ಸೋಮವಾರ ಸುಮಾರು 11 ಗಂಟೆಯ ಸಮಯದಲ್ಲಿ ಅಗ್ನಿಕೊಂಡ ಪ್ರವೇಶಿಸಿ ಮಹಾಮಂಗಳಾರತಿ ನಡೆಯಿತು.
ಕೆಲವು ಕಡೆ ಅನ್ನದಾನ ನಡೆಯುತ್ತಿತ್ತು. 15 ದೇವರುಗಳ ಪಾಲಕ್ಕಿಗಳು ಸಾಲಾಗಿ ಆಕರ್ಷಕವಾಗಿದ್ದವು.
ಕರಗ ಮಹೋತ್ಸವದಲ್ಲಿ ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಎಸ್‌ಎಂ ಹರೀಶ್ ಗೌಡ, ಶ್ರೀ ಧರ್ಮರಾಯಸ್ವಾಮಿ, ಶ್ರೀ ದ್ರೌಪತಾಂಬದೇವಿ ಸೇವಾ ಟ್ರಸ್ಟ್ನ ಅಧ್ಯಕ್ಷ ಶೇಖರ್, ಉಪಾಧ್ಯಕ್ಷ ಜೋಗಿ, ಶೇಖರ್ ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಎಂ ಮುನಿಯಪ್ಪ, ಖಜಾಂಜಿ ಆರ್ ಮುನಿರಾಜು ಇದ್ದರು