ಜಿಲ್ಲೆ

ವಿಜೃಂಭಣೆಯಿಂದ ನೆರವೇರಿದ ಕರಗ ಮಹೋತ್ಸವ

Mysuru - Desk - Ravikumar

ಅರಸೀಕೆರೆ: ನಗರದ ಹಾಸನ ರಸ್ತೆ ಬಲಭಾಗದ ಬಡಾವಣೆಗೆ ಹೊಂದಿಕೊಂಡಂತಿರುವ ಮುತ್ತು ಮಾರಿಯಮ್ಮ ದೇವಿ ಕರಗ ಮಹೋತ್ಸವ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.

ಕಂತೇನಹಳ್ಳಿ ಕೆರೆ ಬಳಿ ದೇವಿಯ ಕರಗಕ್ಕೆ ಪೂಜೆ ಸಲ್ಲಿಸಿ ಬರಿಗಾಲಲ್ಲಿ ದೇಗುಲದವರೆಗೂ ಮೆರವಣಿಗೆ ನಡೆಸಿದರು. ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ಟ್ರ್ಯಾಕ್ಟರ್ ಅನ್ನು ಹರಕೆ ಹೊತ್ತವರು ಎಳೆದು ತರುತ್ತಿದ್ದ ದೃಶ್ಯ ಎಲ್ಲರನ್ನೂ ನಿಬ್ಬೆರಗಾಗಿಸಿತು.

ಪಟಾಕಿ ಸಿಡಿಸಿ ಪುಷ್ಪಾರ್ಚನೆ ಮಾಡಿ ಕರಗ ಹೊತ್ತವರನ್ನು ಬರಮಾಡಿಕೊಂಡರು. ದೇವಾಲಯ ಸಮಿತಿಯಿಂದ ಪ್ರಸಾದ ವಿತರಿಸಲಾಯಿತು. ನೂರಾರು ಭಕ್ತರು ಹೆಜ್ಜೆ ಹಾಕಿದರು. ಜಾತ್ರಾ ಮಹೋತ್ಸವ ಮೇ.1ರಂದು ಗುರುವಾರ ಸಂಪನ್ನಗೊಳ್ಳಲಿದೆ.