ಬಾದಾಮಿ : ತಾಲೂಕಿನ ಕಿತ್ತಲಿ ಶಾಲೆಯಲ್ಲಿ ನಡೆದ ಪ್ರೌಢಶಾಲೆಗಳ ಕುಳಗೇರಿ ವಲಯಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕರಡಿಗುಡ್ಡ ಎಸ್.ಎನ್. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸಮಗ್ರ ವೀರಾಗ್ರಣಿ ಪ್ರಶಸ್ತಿ ಭಾಜನವಾಯಿತು.
ಕುಮಾರಿ ಯಾವಕ್ಕ ವಡ್ಡಟ್ಟಿ 100 ಮೀಟರ್ (ಪ್ರಥಮ), ಶಿವಲೀಲಾ ಗಾಜಿ 200 ಮೀಟರ್ (ಪ್ರಥಮ), ಜಯಶ್ರೀ ಮೋಸಿ 400 ಮೀಟರ್ (ಪ್ರಥಮ), 1500 ಮೀಟರ್ (ಪ್ರಥಮ) ಸುಶ್ಮಿತಾ ಗಾಜಿ 800 ಮೀಟರ್ (ಪ್ರಥಮ), 3000 ಮೀಟರ್ (ಪ್ರಥಮ), ದ್ಯಾಮವ್ವ ಕೆಂಪಣ್ಣವರ ತ್ರಿವಿಧ ಜಿಗಿತ (ಪ್ರಥಮ) ಉದ್ದ ಜಿಗಿತ (ದ್ವಿತೀಯ), ಮಂಜುನಾಥ ಮಣ್ಣೂರ 100 ಮೀಟರ್ (ಪ್ರಥಮ) 400 ಮೀಟರ್ (ಪ್ರಥಮ) ವಿಠ್ಠಲ ಕಮಲದಿನ್ನಿ 800 (ಪ್ರಥಮ), ಹದಿನೈದು ನೂರು (ಪ್ರಥಮ).
ಮಹೇಶ್ ತುಡುವಿನ್ 100 ಮೀಟರ್ (ದ್ವಿತೀಯ), ಸಕ್ಕುಬಾಯಿ ಗಾಜಿ ಎರಡು ನೂರು ಮೀಟರ್ (ದ್ವಿತೀಯ), ವಿಜಯಲಕ್ಷ್ಮೀ ತ್ಯಾಪಿ 800 ಮೀಟರ್ (ದ್ವಿತೀಯ) ಶಾಂತವ್ವ ಕೆಂಪಣ್ಣವರ 3000 ಮೀಟರ್ (ದ್ವಿತೀಯ), ನೇಹಾಜಲಿಗೇರಿ ಚಕ್ರ ಎಸೆತ (ದ್ವಿತೀಯ), ಸೂಫಿಯ ನದ್ಾ ತ್ರಿವಿಧ ಜಿಗಿತ (ದ್ವಿತೀಯ), ಅಕ್ಷತಾ ಗೌಡ ಚಕ್ರ ಎಸೆತ (ತೃತೀಯ), ಚಂದ್ರಶೇಖರ್ ಸಕ್ರಿ 1500 ಮೀಟರ್ ಹನುಮಂತ್ ಶೇಖರ 3000 ಮೀಟರ್ (ತೃತೀಯ), ಮಹಿಳೆಯರ 4*100 ಮೀಟರ್ ನಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ಉಜ್ವಲಕಾಂತ ಬಸರಿ , ಎಸ್.ಡಿ.ಎಂ.ಸಿ. ಅಧ್ಯಕ್ಷ ಗೂಳಪ್ಪ ಮಣ್ಣೂರ, ಗ್ರಾ.ಪಂ. ಸದಸ್ಯರಾದ ಯಲ್ಲಪ್ಪ ಮನ್ನೂರ, ಭೀಮಶಿ ಶೆಟ್ಠಪ್ಪನವರ, ಹನುಮಂತ ಕಮಲದಿನ್ನಿ, ಪಿಕೆಪಿಎಸ್ ಅಧ್ಯಕ್ಷ ಹನುಮಂತ ದಾಸರ, ಎಸ್.ಡಿ.ಎಂ.ಸಿ. ಸದಸ್ಯರಾದ ಪಕೀರಪ್ಪ ಕ್ಯಾತನ್ನವರ, ಭೀಮಶಿ ಲೆಂಕೆಪ್ಪನವರ, ಶಿವಾನಂದ ತಳ್ಯಾಳ, ಮುದುಕಣ್ಣ ತಳವಾರ, ಶೇಕಪ್ಪ ನರಿ, ಮಂಜುನಾಥ ಮಣ್ಣೂರ, ದೈಹಿಕ ಶಿಕ್ಷಕ ಸುರೇಶ ರಾಥೋಡ ಹರ್ಷ ವ್ಯಕ್ತಪಡಿಸಿದ್ದಾರೆ.