ಜಿಲ್ಲೆ

ಕಾಪು ಶಾಸಕರಿಗೆ ಕರೊನಾ ಪಾಸಿಟಿವ್

Udupi

ಉಡುಪಿ: ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ.

ವಾರದ ಹಿಂದೆ ಶಾಸಕರ ಆಪ್ತ ಕಾರ್ಯದರ್ಶಿಗೆ ಕರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ 7 ದಿನಗಳಿಂದ ಶಾಸಕರು ಹೋಂ ಕ್ವಾರಂಟೈನಲ್ಲಿದ್ದರು. ಮುಂಜಾಗೃತ ಕ್ರಮವಾಗಿ ಶಾಸಕರ ಗಂಟಲು ದ್ರ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಗೊತ್ತಾಗಿದೆ. ಕೋವಿಡ್-19 ಲಕ್ಷಣಗಳು ಇಲ್ಲದಿರುವುದರಿಂದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕ್ಸಿತೆಗೆ ದಾಖಲಾಗಿದ್ದಾರೆ.