ಉಡುಪಿ: ದೇವಸ್ಥಾನಗಳಲ್ಲಿ ನಡೆಯುವ ಅನ್ನದಾನದಿಂದ ಕ್ಷೇತ್ರದ ಸಾನಿಧ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಕಾಪು ಮಾರಿಗುಡಿ ಬ್ರಹ್ಮಕಲಶೋತ್ಸವದಲ್ಲಿ 3 ರಿಂದ 4 ಲಕ್ಷ ಜನರಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಕ್ಷೇತ್ರಕ್ಕೆ 23ರಂದು ಉತ್ತರವಾಹಿನಿ (ಉಡುಪಿ ಜಿಲ್ಲೆ) ಹಸಿರುವಾಣಿ ಹೊರೆಕಾಣಿಕೆ ಆಯೋಜಿಸಲಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಮಂಗಳವಾರ ಕಾಪು ಮಾರಿಗುಡಿ ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಸಮರ್ಪಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗಳಿಂದಲೂ ಹೊರೆಕಾಣಿಕೆ ಸಮರ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನ್ನಸಂತರ್ಪಣೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಪಟ್ಟಿಯಲ್ಲಿ ಉಲ್ಲೇಖಿಸಿದ ರ್ನಿದಿಷ್ಟ ಬ್ರಾ$್ಯಂಡ್ ಸಾಮಗ್ರಿಗಳನ್ನು ಭಕ್ತರು ಒದಗಿಸಬೇಕು. ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಜನಾ ತಂಡಗಳು ನೋಂದಣಿ ಮಾಡಬೇಕು ಎಂದರು.
ಹೊರೆಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, 22ರಂದು 3 ಗಂಟೆಗೆ ದಣ ವಾಹಿನಿ (ದ.ಕ. ಜಿಲ್ಲೆ) ಹೊರೆಕಾಣಿಕೆ ಮೆರವಣಿಗೆ ಕೊಪ್ಪಲಂಗಡಿಯಿಂದ ಕ್ಷೇತ್ರದವರೆಗೆ ನಡೆಯಲಿದೆ. 23ಕ್ಕೆ 3 ಗಂಟೆಗೆ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಹಸಿರುಹೊರೆಕಾಣಿಕೆ ಪಾಂಗಾಳದಿಂದ ಹೊರಟು ಕ್ಷೇತ್ರದವರೆಗೆ ಮೆರವಣಿಗೆಯಲ್ಲಿ ಸಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯ ರಮೇಶ್ ಕಾಂಚನ್, ಮೊಗವೀರ ಮಹಾಜನ ಸಂದ ಅಧ್ಯಕ್ಷ ಜಯ ಸಿ. ಕೊಟ್ಯಾನ್, ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ಪ್ರಮುಖರಾದ ವೀಣಾ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಕೃಷ್ಣಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಹೊರೆಕಾಣಿಕೆಗೆ ನೀಡುವ ಸಾಮಗ್ರಿ ಮಹಾ ಅನ್ನಸಂತರ್ಪಣೆಗೆ ಬೇಕಾಗುವ ಅಕ್ಕಿ (ಸ್ವಸ್ತಿಕ್ ಬ್ಯಾಂಡ್), ತೆಂಗಿನಕಾಯಿ, ಸೀಯಾಳ, ಸಕ್ಕರೆ, ಬೆಲ್ಲ, ತೆಂಗಿನ ಎಣ್ಣೆ, ನಂದಿನಿ ತುಪ್ಪ, ತೊಗರಿ ಬೇಳೆ (ಪಿಕಾಕ್ ಬ್ಯಾಂಡ್), ಉದ್ದಿನ ಬೇಳೆ (ಪಿಕಾಕ್ ಬ್ರಾಂಡ್), ದವಸ ಧಾನ್ಯಗಳು, ಸಂಬಾರ ದಿನಸಿಗಳು, ತರಕಾರಿ, ಹಣ್ಣು - ಹಂಪಲು, ಬಾಳೆ ಎಲೆ, ಹಾಳೆ ತಟ್ಟೆ ಹಾಗೂ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಸತ್ಕರ್ಮಗಳಿಗೆ ವಿನಿಯೋಗವಾಗುವ ಅಡುಗೆ ಪರಿಕರಗಳನ್ನು ನೀಡಬಹುದು.
ಉಡುಪಿ ಕ್ಷೇತ್ರದ ಪ್ರತಿ ಮನೆಯಿಂದ ಹೊರೆಕಾಣಿಕೆ ಅಮ್ಮನ ಸನ್ನಿಧಿಗೆ ತಲುಪಿಸುವುದು ನಮ್ಮ ಗುರಿ. ಇದಕ್ಕಾಗಿ 35 ವಾರ್ಡ್ಗಳು, ಮಣಿಪಾಲ ಮತ್ತು ಮಲ್ಪೆ ವಲಯ, ಬ್ರಹ್ಮಾವರ ಗ್ರಾಮೀಣ ವಿಭಾಗ ಸೇರಿದಂತೆ ಕ್ಷೇತ್ರವನ್ನು 4 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ವಲಯಕ್ಕೆ ಪ್ರತಿನಿಧಿಗಳನ್ನು ನೇಮಿಸಲಾಗಿದೆ. ಇದರೊಂದಿಗೆ ಭಜನಾ ಮಂಡಳಿ, ಹಾಲುಉತ್ಪಾದಕರ ಸಂ, ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು ಕೈಜೋಡಿಸಲಿದ್ದಾರೆ. -ಬೈಕಾಡಿ ಸುಪ್ರಸಾದ್ ಶೆಟ್ಟಿ ಉಡುಪಿ ವಿಧಾನಸಭಾ ಕ್ಷೇತ್ರ ಹೊರೆಕಾಣಿಕೆ ಸಮಿತಿ ಅಧ್ಯಕ್ಷ