ದೇವದುರ್ಗದಲ್ಲಿ ಜಯ ಕರ್ನಾಟಕ ಸಂಘಟನೆ ಆಯೋಜಿಸಿದ್ದ ಕರುನಾಡ ಉತ್ಸವ ಕಾರ್ಯಕ್ರಮವನ್ನು ವಿವಿಧ ಗಣ್ಯರು ಉದ್ಘಾಟಿಸಿದರು. ಶ್ರೀಹಜರತ್ ಜಹೀರುದ್ದೀನ್ ಪಾಷಾ ಸ್ವಾಮೀಜಿ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಬಿಇಒ ಎಚ್.ಸುಖದೇವ್, ಪಿಐ ಅಶೋಕ ಸದಲಗಿ, ಪಿಡಬ್ಲ್ಯುಡಿ ಎಇಇ ಬಕ್ಕಪ್ಪ ಹೊಸಮನಿ, ಶ್ರೀನಿವಾಸ್ ನಾಯಕ, ಸಂಘಟನೆಯ ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ ಇತರರಿದ್ದರು. 
ಜಿಲ್ಲೆ

ನೆಲದ ಹೋರಾಟದಲ್ಲಿ ಎಲ್ಲರೂ ಒಂದುಗೂಡಲಿ

ದೇವದುರ್ಗ: ನಾಡು ನುಡಿ, ನೆಲ ಜಲದ ರಕ್ಷಣೆ ಹಾಗೂ ಉಳಿವಿಗಾಗಿ ಹೋರಾಟ ಮಾಡುವುದು ಕೇವಲ ಕನ್ನಡ ಪರ ಸಂಘಟನೆಗಳ ಕೆಲಸವಲ್ಲ. ಇದು ಎಲ್ಲರ ದೇಯ್ಯವಾಗಲಿ ಎಂದು ಶಿಖರಮಠದ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನೆಲಜಲದ ವಿಷಯದಲ್ಲಿ ಕನ್ನಡ ಪರ ಸಂಘಟನೆಗಳು ಉತ್ತಮ ಕೆಲಸ

ಪಟ್ಟಣದ ಜ್ಞಾನಗಂಗ ಶಿಕ್ಷಣ ಸಂಸ್ಥೆಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ಕರುನಾಡ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಂಗಳವಾರ ಮಾತನಾಡಿದರು. ನೆಲಜಲದ ವಿಷಯದಲ್ಲಿ ಕನ್ನಡ ಪರ ಸಂಘಟನೆಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಕಾವೇರಿ, ಬೆಳಗಾವಿ ಗಡಿ ವಿಷಯ ಸೇರಿ ಕರ್ನಾಟಕದ ಯಾವುದೇ ಸಮಸ್ಯೆಗೂ ಸಂಘಟನೆಗಳು ಹೋರಾಟ ನಡೆಸುತ್ತಿವೆ ಎಂದರು.

ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಕುಮಾರ ಯಾದವ್ ಮಾತನಾಡಿ, ನಾಡು, ನುಡಿ ವಿಷಯ ಬಂದಾಗ ಸಂಘಟನೆ ಹೋರಾಟದಲ್ಲಿ ಸದಾ ಮುಂದಿರಲಿದೆ. ಅಲ್ಲದೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಸಂಘಟನೆಯ ಹೋರಾಟ ಮುಂದುವರಿಸಿಕೊಂಡು ಹೋಗಲಿದೆ. ಯುವಕರು ಸಂಘಟನೆ ಸೇರುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದರು.

ಹಜರತ್ ಜಹೀರುದ್ದೀನ್ ಪಾಷಾ ಸ್ವಾಮೀಜಿ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಬಿಇಒ ಎಚ್.ಸುಖದೇವ್, ಪಿಐ ಅಶೋಕ ಸದಲಗಿ, ಪಿಡಬ್ಲ್ಯುಡಿ ಎಇಇ ಬಕ್ಕಪ್ಪ ಹೊಸಮನಿ, ಶ್ರೀನಿವಾಸ್ ನಾಯಕ, ಸಂಘಟನೆಯ ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಪ್ರಮುಖರಾದ ಮಾದವರಾವ್ ಉಭಾಳೆ, ಕೃಷ್ಣಕುಮಾರ ಮಡಿವಾಳ, ಕೇಶವಮೂರ್ತಿ, ಅಂಬರೀಶ, ಸುನಿಲ್‌ಕುಮಾರ ಖಾಜಾಹುಸೇನ್ ಇತರರಿದ್ದರು.