ಝಳಕಿ ಸಮೀಪದ ಕಪನಿಂಬರಗಿ ಗ್ರಾಪಂ ಅಧ್ಯಕ್ಷರಾಗಿ ಪ್ರತಿಭಾ ಜ್ಞಾನೇಶ್ವರ ಠೋಕೆ ಹಾಗೂ ಉಪಾಧ್ಯಕ್ಷರಾಗಿ ಸಿದ್ದಲಿಂಗ ಖಾನಾಪುರ ಆಯ್ಕೆಯಾದ ನಂತರ ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತ ಖಡೆಖಡೆ ಅವರೊಂದಿಗೆ ವಿಜಯೋತ್ಸವ ಆಚರಿಸಿದರು. 
ಜಿಲ್ಲೆ

ಕಪನಿಂಬರಗಿ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ

ಝಳಕಿ: ಕಪನಿಂಬರಗಿ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪ್ರತಿಭಾ ಠೋಕೆ, ಉಪಾಧ್ಯಕ್ಷರಾಗಿ ಸಿದ್ದಲಿಂಗ ಖಾನಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಸಂತ ರಾಠೋಡ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಿಡಿಒ ವಿಜಯ ತಳವಾರ, ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತ ಖಡೆಖಡೆ, ಲಕ್ಷ್ಮೀಬಾಯಿ ಗೌಂಡಿ, ರಾಜುಗೌಡ ಬಿರಾದಾರ, ಪಂಡಿತ ಬನಸೋಡೆ, ಶ್ರೀದೇವಿ ವಾಲಿಕಾರ, ಬದ್ರಿಶ ಮಹಷಿ, ಅಂಬಣ್ಣ ಜಾಧವ, ಉಮೇಶ ಲೋದಿ, ದಾದಾಸಾಹುಕಾರ ಖಾನಾಪುರ ಮತ್ತು ಬೆಂಬಲಿಗರು ಇದ್ದರು.