ಜಿಲ್ಲೆ

ಕಾಣಿಯೂರು ಉಜ್ವಲ ಸಂಜೀವಿನಿ ಒಕ್ಕೂಟದ ಸಭೆ

ಸೌಮ್ಯ ಆರ್

ಕಡಬ: ಕಾಣಿಯೂರು ಗ್ರಾಪಂ ಉಜ್ವಲ ಸಂಜೀವಿನಿ ಒಕ್ಕೂಟದ ಮಾಸಿಕ ಒಕ್ಕೂಟ ಸಭೆ ಹಾಗೂ ಮಹಿಳಾ ದಿನಾಚರಣೆ ಕಾಣಿಯೂರು ಗ್ರಾಪಂ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕಾಣಿಯೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ರಘು ಬಿ.ಎನ್ ಉದ್ಘಾಟಿಸಿದರು. ಉಜ್ವಲ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಚಂದ್ರಾವತಿ ರೈ, ಕಾಣಿಯೂರು ಸರ್ಕಾರಿ ಆರೋಗ್ಯ ಸಮುದಾಯ ಕೇಂದ್ರದ ಸಿಎಚ್‌ಒ ಜಲ್ಸಿ, ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕಿ ನಳಿನಾಕ್ಷಿ, ಕಾಣಿಯೂರು ಗ್ರಾಪಂ ಸದಸ್ಯರಾದ ಲಲಿತಾ ದರ್ಖಾಸು, ತೇಜಕುಮಾರಿ ಉದ್ಲಡ್ಡ, ಅಂಬಾಕ್ಷಿ ಕೂರೇಲು ಉಪಸ್ಥಿತರಿದ್ದರು.

ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಒಕ್ಕೂಟ ಪದಾಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಸಂಘದ ಸದಸ್ಯರು ಭಾಗವಹಿಸಿದ್ದರು. ಎಲ್‌ಸಿಆರ್‌ಪಿ ವಿನುತಾ ನಿರೂಪಿಸಿದರು. ಎಲ್‌ಸಿಆರ್‌ಪಿ ಚಂದ್ರಿಕಾ ಸ್ವಾಗತಿಸಿದರು. ಪಶುಸಖಿ ಲೀಲಾವತಿ ವಂದಿಸಿದರು.