ಜಿಲ್ಲೆ

ನಾಳೆಯಿಂದ ಕನ್ಯಾನದಲ್ಲಿ ಜಾತ್ರೋತ್ಸವ

ಪುತ್ತೂರು: ಕನ್ಯಾನ ಶ್ರೀ ಮಲರಾಯ ದೈವಸ್ಥಾನ ಕಾಲಾವಽ ಜಾತ್ರೋತ್ಸವ ಏ.೭ರಿಂದ ೧೧ರವೆರೆಗೆ ನಡೆಯಲಿದೆ. ಏ.೭ಬೆಳಗ್ಗೆ ೯:೩೦ಕ್ಕೆ ಗಣಪತಿ ಹವನ. ಬೆಳಗ್ಗೆ ೧೦:೩೦ಕ್ಕೆ ಅಶ್ವತ್ಥ ನಾರಾಯಣ ಪೂಜೆ. ಸಂಜೆ ದ್ವಜಾರೋಹಣ. ಏ.೮ರ ರಾತ್ರಿ ಶ್ರೀ ಅರಸು ದೈವದ ನೇಮ, ರಾತ್ರಿ ಗಂಟೆ ೭ರಿಂದ ತುಳು ನಾಟಕ ಮದಿಮೆದ ಇಲ್ಲ್. ಏ.೯ರ ಮಧ್ಯಾಹ್ನ ಶ್ರೀ ಮಲರಾಯ ದೈವದ ನೇಮ ರಾತ್ರಿ ಪ್ರಥಮ ಬಂಡಿ. ರಾತ್ರಿ ಗಂಟೆ ೮ ರಿಂದ ಸಂಗೀತ ರಸಮಂಜರಿ, ಏ.೧೦ರಂದು ಮಧ್ಯಾಹ್ನ ಶ್ರೀ ಮಲರಾಯ ದೈವದ ಹರಿಕೆ ನೇಮ ರಾತ್ರಿ ನಡುಬಂಡಿ, ತುಳು ಸಾಮಾಜಿಕ ನಾಟಕ ಪುದರ್ ದೀತಿಜಿ, ಏ.೧೧ಮಧ್ಯಾಹ್ನ ಪಿಲಿಚಾಮುಂಡಿ ದೈವದ ನೇಮ, ರಾತ್ರಿ ಕಡೇ ಬಂಡಿ. ದೈವಗಳ ಒಲಸರಿ. ಧ್ವಜಾವರೋಹಣ. ಬಾಮುಗ ಬೂಳ್ಯ ವಿತರಣೆ. ರಾತ್ರಿ ಗಂಟೆ ೧.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಅರ್ಪಿಣಿಗುತ್ತು ಕಾರ್ಯದರ್ಶಿ ಗಂಗಾಧರ ನಾಯಕ್ ಕನ್ಯಾನ ಪ್ರಕಟಣೆ ತಿಳಿಸಿದ್ದಾರೆ.