ಆಳಂದನ ಹಜರತ್ ಲಾಡ್ಲೆ ಮಶಾಕ್ ದರ್ಗಾಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಭೇಟಿ ನೀಡಿ ಮಾಹಿತಿ ಪಡೆದರು. ಹೆಚ್ಚುವರಿ ಎಸ್‌ಪಿ ಎನ್.ಶ್ರೀನಿಧಿ, ಸಿಪಿಐ ಸಿದ್ದರಾಮಯ್ಯ ಇದ್ದರು. 
ಜಿಲ್ಲೆ

ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ

ರಾಜು ಯಮಕನಮರಡಿ

ಆಳಂದ: ಮಹಾ ಶಿವರಾತ್ರಿ ನಿಮಿತ್ತ ಮಾ.೮ರಂದು ಹಜರತ್ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವಚೈತನ್ಯ ಲಿಂಗಕ್ಕೆ ಪೂಜೆ ಸಲ್ಲಿಸುವ ವೇಳೆ ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಎಚ್ಚರಿಕೆ ನೀಡಿದರು.

ಲಾಡ್ಲೆ ಮಶಾಕ್ ದರ್ಗಾಕ್ಕೆ ಸೋಮವಾರ ಬೆಳಗ್ಗೆ ಭೇಟಿ ನೀಡಿ ರಾಘವಚೈತನ್ಯ ಲಿಂಗ ಸ್ಥಳ ಪರಿಶೀಲಿಸಿದ ಅವರು, ಶಿವರಾತ್ರಿಯಂದು ಲಿಂಗಕ್ಕೆ ಪೂಜೆ ಸಲ್ಲಿಸುವ ವಿಷಯ ಕೋರ್ಟ್ನಲ್ಲಿದೆ. ತೀರ್ಪು ಏನೇ ಬಂದರೂ ಎಲ್ಲರೂ ಪಾಲನೆ ಮಾಡಬೇಕು. ೨೦೨೨ರಲ್ಲಿ ಎರಡು ಸಮುದಾಯಗಳ ಮಧ್ಯೆ ಗಲಾಟೆ ನಡೆದಿದ್ದರಿಂದ ಈ ಸಲ ಕಾನೂನು ಉಲ್ಲಂಘನೆ ಆಗದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು. ಜನರು ಸಹಕಾರ ನೀಡಬೇಕು ಎಂದು ಕೋರಿದರು.

ಹೆಚ್ಚುವರಿ ಎಸ್‌ಪಿ ಎನ್.ಶ್ರೀನಿಧಿ, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಸಿದ್ದರಾಮಯ್ಯ ಇತರರಿದ್ದರು.