ಹುಬ್ಬಳ್ಳಿ: ಎಂಟು ವರ್ಷ ಹಳೆಯದಾದ ಕಾಂತರಾಜು ಸಮಿತಿಯ ಜಾತಿ ಜನಗಣತಿ ವರದಿ ಸಂರ್ಪೂಣ ಅವೈಜ್ಞಾನಿಕವಾಗಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಒಪ್ಪಿಕೊಳ್ಳಬಾರದು ಎಂದು ಅಖಿಲ ಭಾರತ ವೀರಶೈವ -ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ ಆಗ್ರಹಿಸಿದ್ದಾರೆ.
ಈಗಾಗಲೇ ಅತ್ಯಂತ ಹಿರಿಯ ಶಾಸಕರು, ಕಾಂಗ್ರೆಸ್ನ ಅನೇಕ ಸಚಿವರು ಕಾಂತರಾಜು ಸಮಿತಿಯ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ಮಠಾಧೀಶರು ಸಹ ವಿರೋಧಿಸಿದ್ದಾರೆ. ಸಮಿತಿಯ ವರದಿ ಸೋರಿಕೆಯಾಗಿದೆ ಎಂಬ ಸಂಶಯವಿದೆ. ಇದರಿಮದ ಅನೇಕ ಸಮಾಜಗಳಿಗೆ ಅನ್ಯಾಯವಾಗಲಿದೆ.
ಈ ದಿಶೆಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಅನೇಕ ಶಾಸಕರು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಪುರಸ್ಕರಿಸಬೇಕು.
ಕಾಂತರಾಜು ಸಮಿತಿ ವರದಿ ತಿರಸ್ಕರಿಸಿ ಮತ್ತೊಮ್ಮೆ ಸಮರ್ಪಕ ಹಾಗೂ ವೈಜ್ಞಾನಿಕ ರೀತಿಯಲ್ಲಿ ಜಾತಿ ಜನಗಣತಿ ಮಾಡಿಸಿ ನೂತನ ವರದಿ ಸಿದ್ದಪಡಿಸುವದು ಸೂಕ್ತ ಎಂದು ಕೊಟಗಿ ಒತ್ತಾಯಿಸಿದ್ದಾರೆ.