ಬೆಳ್ತಂಗಡಿ: ಕಾಂತಾರ ಚಿತ್ರವನ್ನು ನೋಡಿ ಪಂಜುರ್ಲಿ ದೈವದ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಯುವತಿ ತಪ್ಪಿನ ಅರಿವಾಗಿ ಧರ್ಮಸ್ಥಳ ಕ್ಷೇತ್ರದಲ್ಲಿ ತಪ್ಪೊಪ್ಪಿಗೆ ಕಾಣಿಕೆ ಹಾಕಿದ್ದಾಳೆ.
ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ಎಸ್. ರೆಡ್ಡಿ ಕಾಂತಾರ ಚಿತ್ರದಲ್ಲಿರುವಂತೆ ವೇಷ ಹಾಕಿ ಪೇಜ್‌ನಲ್ಲಿ ಹಂಚಿಕೊಂಡಿದ್ದಳು. ಅನಾರೋಗ್ಯ ಕಾಡಿದ ಬಳಿಕ ಆಕೆ ಗುರುವಾರ ಕ್ಷೇತ್ರಕ್ಕೆ ಆಗಮಿಸಿ ತಪ್ಪು ಕಾಣಿಕೆ ಹಾಕಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆ ಕೇಳಿದ್ದಾಳೆ. ತುಳುನಾಡಿನ ನಂಬಿಕೆಯ ದೈವ ಪಂಜುರ್ಲಿಯ ರೀಲ್ಸ್ ವೈರಲ್ ಆಗುತ್ತಿದ್ದಂತೆ ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು.