ಕ್ರೀಡಾಕೂಟ  
ಜಿಲ್ಲೆ

ಕ್ರೀಡಾಕೂಟ ಸಮಾರೋಪದಲ್ಲಿ ಶಾಸಕ ಭಾಗಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಮಧುರೆ
ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಸಮಾರೋಪದಲ್ಲಿ ಶಾಸಕ ಧೀರಜ್ ಮುನಿರಾಜು ಪಾಲ್ಗೊಂಡಿದ್ದರು. ಎರಡು ದಿನ ನಡೆದ ಕ್ರೀಡಾಕೂಟದಲ್ಲಿ ವಿಜೇತರನ್ನು ಸನ್ಮಾನಿಸಲಾಯಿತು. ಕಬ್ಬಡ್ಡಿ ಆಟದ ಅಂತಿಮ ಘಟ್ಟದಲ್ಲಿ ಶ್ರೀವಾಣಿ ಪಿಯು ಕಾಲೇಜು ಮತ್ತು ದೊಡ್ಡಬಳ್ಳಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದ ಮಧ್ಯೆ ಪಂದ್ಯ ಏರ್ಪಟ್ಟಿತ್ತು. ಪಂದ್ಯ ವೀಕ್ಷಿಸಿ ನಂತರ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಿ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟ ಕ್ರೀಡೆಯಲ್ಲಿ ಪಾಲ್ಗೊಂಡು ತಾಲೂಕಿಗೆ ಕೀರ್ತಿ ತರಬೇಕು ಎಂದು ಶುಭಹಾರೈಸಿದರು.