ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲು ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳನ್ನು ತಹಸೀಲ್ದಾರ್ ರವಿ ಅಂಗಡಿ ಗುರುವಾರ ಪರಿಶೀಲಿಸಿದರು. 
ಜಿಲ್ಲೆ

ಚಿಕ್ಕಮಾದಿನಾಳದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳ ಪರಿಶೀಲನೆ

ಕನಕಗಿರಿ: ತಾಲೂಕಿನ ಚಿಕ್ಕಮಾದಿನಾಳದಲ್ಲಿ ಕೋವಿಡ್ ಕೇರ್ ಸೆಂಟರ್‌ಆರಂಭಿಸಲು ತಹಸೀಲ್ದಾರ್ ರವಿ ಅಂಗಡಿ ಗುರುವಾರ ಸ್ಥಳ ಪರಿಶೀಲಿಸಿದರು.

ಗ್ರಾಮದ ಹೊರ ಭಾಗದಲ್ಲಿರುವ ಪ್ರೌಢಶಾಲೆಗೆ ಭೇಟಿ ನೀಡಿ ಕೊಠಡಿ ಹಾಗೂ ಮೂಲ ಸೌಲಭ್ಯ ವೀಕ್ಷಿಸಿದರು. ಚಿಕ್ಕಮಾದಿನಾಳ, ಬಸರಿಹಾಳ, ಗೌರಿಪುರ, ಮುಸಲಾಪುರ ಗ್ರಾಪಂ ವ್ಯಾಪ್ತಿಯ ಸೋಂಕಿತರಿಗೆ 24 ಬೆಡ್‌ನ ಆರೈಕೆ ಕೇಂದ್ರ ಆರಂಭಿಸಲಾಗುತ್ತಿದೆ. ಸೋಂಕಿತರಿಗೆ ಜನಪ್ರತಿನಿಧಿಗಳು ಹಲವು ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಸಿಆರ್‌ಪಿ ವಿನಾಯಕ ಬಂಡಿ, ಕಂದಾಯ ನಿರೀಕ್ಷಕ ಬಸ್ರುದ್ದೀನ್, ಮುಖಂಡ ದುರ್ಗಪ್ಪ ದಢೇಸುಗೂರು ಹಾಗೂ ಇತರರಿದ್ದರು.