ಬೆಂಗಳೂರು:ಕನ್ನಡದ ಶ್ರೇಷ್ಠ ಕೃತಿಗಳು,ಪರಂಪರೆ ಮೌಲ್ಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿದರೆ ಮಾತ್ರವೇ ಕನ್ನಡ ಮತ್ತು ಸಂಸತಿ ಅಜರಾಮರವಾಗಿ ಉಳಿಯಲಿದೆ ಎಂದು ಖ್ಯಾತ ವಾಗ್ಮಿ ಡಾ.ಗುರುರಾಜ. ವಿ.ಕರಜಗಿ ಅಭಿಪ್ರಾಯಪಟ್ಟಿದ್ದಾರೆ.
ಬಬ್ಬೂರುಕಮ್ಮೆ ಸೇವಾ ಸಮಿತಿ, ಭಾನುವಾರ ನಗರದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಬಳಗಕೂಟ- 2024 ಸಮಾರಂಭದಲ್ಲಿ ಮಾತನಾಡಿದರು.
ಬಿಎಂಶ್ರೀ ಕನ್ನಡದ ಶ್ರೇಷ್ಠ ಕಟ್ಟಾಳಾಗಿದ್ದರು.ಕನ್ನಡ ಭಾಷೆ ಪ್ರೌಢಿಮೆ,ನತೆ ಹೆಚ್ಚಿಸುವ ಜೊತೆಗೆ ಅದನ್ನು ಪಾಂಡಿತ್ಯಪೂರ್ಣ ರೂಪದಿಂದ ಸರಳ ಅಭಿವ್ಯಕ್ತಿಗೆ ರೂಪಾಂತರಿಸಿ ಜನರಿಗೆ ತಲುಪುವಂತೆ ಮಾಡಿದರು.ಹಲವು ಸಾಂಸತಿಕ ಬಿಕ್ಕಟ್ಟು, ಸ್ಥಿತ್ಯಂತರಗಳ ನಡುವೆ ಕನ್ನಡವನ್ನು ಬೆಳೆಸಿ,ಪೋಷಿಸಿ ಅರ ಸಂಸತಿ ದಾಖಲಾಗುವಂತೆ ಮಾಡಿದ ಕಾರಣಕ್ಕೆ ಅವರನ್ನು ಕನ್ನಡದ ಕಣ್ವ ಎಂದು ಕರೆಯುತ್ತಿದ್ದೇವೆ. ಅವರೊಬ್ಬ ಅಸಾಮಾನ್ಯ ವಾಗ್ಮಿ, ಸಾಹಿತಿ, ಸಂಟಕರಾಗಿ ಕನ್ನಡ ಸಂಸತಿಯ ಯುಗಪ್ರವರ್ತಕರು ಎಂದರು.
ಬಬ್ಬೂರುಕಮ್ಮೆ ಸೇವಾ ಸಮಿತಿ ಅಧ್ಯ ಡಾ.ಎ.ವಿ.ಪ್ರಸನ್ನ ಮಾತನಾಡಿ, ಬಿಎಂಶ್ರೀ ನವೋದಯ ಸಾಹಿತ್ಯಕ್ಕೆ ನಾಂದಿ ಹಾಡಿದ ಶ್ರೇಷ್ಠ ಕನ್ನಡ ಬರಹಗಾರರು. ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.ಹಾಸನ ಶೃಂಗೇರಿ ಮಠದ ಅಡಳಿತಾಧಿಕಾರಿ ಎಂ.ಎಸ್.ಶ್ರೀಕಂಠಯ್ಯ, ಗಾನ ಕಲಾಶ್ರೀ ಸಂಗೀತ ವಿದುಷಿ ಎಂ.ಎಸ್.ಶೀಲಾ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. 100ಕ್ಕೂ ಅಧಿಕ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಿತಿ ಉಪಾಧ್ಯ ಡಾ.ಬಿ.ಕೆ.ಪ್ರಭಾಕರ್, ಕಾರ್ಯದರ್ಶಿ ಡಾ.ಎನ್.ಸತ್ಯಪ್ರಕಾಶ್,ಖಜಾಂಚಿ ನಾಗಭೂಷಣ್,ನಿರ್ದೇಶಕ ಶಿವಮೂರ್ತಿ ಮತ್ತಿತರರಿದ್ದರು.