ಕವಿತಾಳದಲ್ಲಿ ಭುವನೇಶ್ವರಿ ಮೂರ್ತಿ ಮೆರವಣಿಗೆಗೆ ಕಲ್ಮಠದ ಸಿದ್ಧಲಿಂಗಸ್ವಾಮಿ ಚಾಲನೆ ನೀಡಿದರು. ಕಲ್ಮಠದ ಸಿದ್ದಲಿಂಗಸ್ವಾಮಿ, ಪಿಎಸ್‌ಐ ವೆಂಕಟೇಶ ನಾಯಕ, ಪ್ರಮುಖರಾದ ಕರಿಯಪ್ಪ ತಾತಾ ಪೂಜಾರಿ, ಶಿವಪ್ಪತಾತಾ ಪೂಜಾರಿ, ಮೌನೇಶ ಪತ್ತಾರ, ಯಮನಪ್ಪ ದಿನ್ನಿ, ಮಹೇಶ ಯಡಿವಾಳ, ಬಲವಂತರಾಯ ವಟಗಲ್, ಶರಣಪ್ಪ ಢೊಣಮರಡಿ, ನಿಂಗಪ್ಪ ತೋಳ, ಶಿವನಪ್ಪ ದಿನ್ನಿ, ರಫಿ ಒಂಟಿಬಂಡಿ, ಸಂಗಮೇಶ, ರಾಮಣ್ಣ ಬಿಎಡ್, ರಾಜು ಕಟ್ಟಿಮನಿ, ಭೀರಪ್ಪ ಹೀರಾ, ರಾಮಣ್ಣ ಬಿಎಡ್, ಹಮೀದ್‌ಪಾಷಾ, ಹನುಮೇಶ ಮಡಿವಾಳ ವಿಜಯಬಾಸ್ಕರ್ ಕೋಸ್ಗಿ, ಗುರುರಾಜ ಬಾಗೋಡಿ, ರಾಘವೇಂದ್ರ ಶೆಟ್ಟಿ. ಲಿಂಗರಾಜ ಕಂದಗಲ್ ಇತರರಿದ್ದರು.
ಕವಿತಾಳ: ಕನ್ನಡ ನಾಡು ನುಡಿಗೆ ಪ್ರತಿಯೊಬ್ಬರು ಬದ್ಧರಾಗಬೇಕು ಎಂದು ಕಲ್ಮಠದ ಸಿದ್ದಲಿಂಗಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯೋತ್ಸವ ಅಂಗವಾಗಿ ಕನ್ನಡಾಂಬೆ ಮೂರ್ತಿಗೆ ಪೂಜೆ ಸಲ್ಲಿಸಿ ಶನಿವಾರ ಮಾತನಾಡಿದರು. ಕನ್ನಡ ಉಳಿವಿಗಾಗಿ ಪ್ರತಿಯೊಬ್ಬರು ಪ್ರಯತ್ನಿಸಬೇಕು. ಕನ್ನಡಭಿಮಾನಿಗಳು ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರದಿಂದ ಆಚಾರಿಸುತ್ತಿರುವುದು ನಾಡಿನ ಹಿರಿಮೆ ಗರಿಮೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಮೂರ್ತಿ ಸಾರೋಟದಲ್ಲಿರಿಸಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.