ಜಿಲ್ಲೆ

ಕನ್ನಡ ಗೀತೆಗಳ ಸ್ಪರ್ಧೆ 9ರಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯೋತ್ಸವ ನಿಮಿತ್ತ ವಿದ್ಯಾಗಿರಿಯ ಧಾರವಾಡ ಕರೋಕೆ ಸಂಸ್ಥೆ ವತಿಯಿಂದ ಕನ್ನಡ ಗೀತೆಗಳ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ಮೈನುದ್ದೀನ ಕಿರವಾಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 9, 10ರಂದು ಎನ್​ಟಿಟಿಎಫ್ ಬಳಿಯ ಶ್ರೀ ಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಕರೋಕೆ ಗೀತೆಗಳ ಆಡಿಷನ್​ ನಡೆಯಲಿದೆ. 2 ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ಈ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಸ್ಪರ್ಧಾಳುಗಳಿಗೆ ನವೆಂಬರ್​ ಅಂತ್ಯಕ್ಕೆ ಅಂತಿಮ ಸ್ಪರ್ಧೆ ನಡೆಸಲಾಗುವುದು ಎಂದರು.

ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ನೀಡಲಿದ್ದು, ಪ್ರಥಮ ಸ್ಥಾನ ಪಡೆದವರಿಗೆ "ಕನ್ನಡ ಗಾನ ಕೌಸ್ತುಭ-2024' ಪ್ರಶಸ್ತಿ ನೀಡಲಾಗುವುದು. ಆಸಕ್ತರು ಧಾರವಾಡ ಕರೋಕೆ, ಅಪ್ಪಾಜಿ ಆರ್ಕೇಡ್​, ಕೆಇಬಿ ಎದುರು, ವಿದ್ಯಾಗಿರಿ ಧಾರವಾಡ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು ಎಂದರು.

ಮೌನೇಶ ಪತ್ತಾರ, ಪ್ರೀತಿ ದೊಡ್ಡಮನಿ, ಇತರರು ಇದ್ದರು.