ಅಳವಂಡಿ: ಕನ್ನಡ ಶಾಲೆಗಳು ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುತ್ತವೆ. ಕನ್ನಡ ಶಾಲೆಗಳೆಂದರೆ ತಾತ್ಸಾರ ಬೇಡ. ಇಲ್ಲಿ ಕಲಿತವರೆ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದು ರಾಯಚೂರು ಗ್ರಾಮೀಣ ಪಿಎಸ್‌ಐ ಪ್ರಕಾಶ ರೆಡ್ಡಿ ಡಂಬಳ ಹೇಳಿದರು.
ಇದನ್ನೂ ಓದಿ:ಕನ್ನಡ ಮಾಧ್ಯಮ ಶಿಕ್ಷಣದಿಂದ ಸಂಸ್ಕಾರ ಉಳಿವು
ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ, ಮಕ್ಕಳ ಹಬ್ಬ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳಲ್ಲಿ ಹೆಚ್ಚು ಧೈರ್ಯವಿರುತ್ತದೆ. ಆದ್ದರಿಂದ ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಬೇಡಿ. ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳಿಸಿ ಅಭ್ಯಾಸದ ಕಡೆಗೆ ಗಮನಹರಿಸಬೇಕು. ಆಗಾಗ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ತಿಳಿದುಕೊಳ್ಳಿ. ಮೊಬೈಲ್‌ನಿಂದ ದೂರವಿರುವಂತೆ ನೋಡಿಕೊಳ್ಳಿ. ಮೊಬೈಲ್‌ನಲ್ಲಿಯೇ ಬಹುಪಾಲು ಸಮಯ ಕಳೆದರೆ ಓದಿನ ಹವ್ಯಾಸ ಕಡಿಮೆಯಾಗಲಿದೆ. ತಂದೆ-ತಾಯಿ ಹಾಗೂ ಗುರುಗಳನ್ನು ಮರೆಯದಿರಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಶಕುಂತಲಾ ಡಂಬಳ, ಮುಖ್ಯಶಿಕ್ಷಕ ಮಹಮದ್‌ರಫಿ, ಪ್ರಮುಖರಾದ ಮಹೇಶ ಡಂಬಳ, ಶರಣಪ್ಪಗೌಡ, ಕೆಂಚವ್ವ, ಅಶೋಕಬಾಬು, ಅಂದಾನಪ್ಪ, ನಾಗಪ್ಪ, ಹನುಮಂತ, ಕೃಷ್ಣ, ಭರಮಪ್ಪ, ಯಂಕಪ್ಪ, ನೀಲಕಂಠಪ್ಪ, ರುದ್ರಪ್ಪ, ಉಮೇಶ ಇತರರಿದ್ದರು.