ಜಿಲ್ಲೆ

ಕನ್ನಡ ಶಾಲೆ ಅಭಿವೃದ್ಧಿ ಪ್ರತಿಯೊಬ್ಬರ ಜವಾಬ್ದಾರಿ

reportermys

ಮಡಿಕೇರಿ: ಕೊಡಗು ಜಿಲ್ಲೆಯ ಯರವ, ಕುಡಿಯ ಹಾಗೂ ಬುಡಕಟ್ಟು ಸಮುದಾಯಗಳ ವಿಶಿಷ್ಟ ಭಾಷೆಗಳನ್ನಾಡುವ ಸಮಾಜಗಳನ್ನು ಗುರ್ತಿಸಬೇಕು. ಅಂತಹ ಬುಡಕಟ್ಟು ಭಾಷೆಗೆ ಆದ್ಯತೆ ನೀಡಬೇಕು ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ವಿಜಯ್ ಪೂಣಚ್ಚ ತಂಬಂಡ ಹೇಳಿದರು.


ಬುಡಕಟ್ಟು ಭಾಷಿಕರನ್ನು ಉಳಿಸಿ ಬೆಳೆಸಿದಲ್ಲಿ ಜಿಲ್ಲೆಯ ಸಂಸ್ಕೃತಿ ಉಳಿಯಲು ಸಾಧ್ಯ. ಬುಡಕಟ್ಟು ಸಮುದಾಯಗಳ ಭಾಷೆ ಮತ್ತು ಭಾಷೆಯಿಂದ ಅಭಿವ್ಯಕ್ತವಾಗುವ ಸಂಸ್ಕೃತಿಯನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಕಾಡು ಮಕ್ಕಳ ಕೂಗು ಕೊಡಗು ಬುಡಕಟ್ಟು ಸಮಾಜದವರ ಕಥನಗಳು ಎಂಬ ಕೃತಿಯಲ್ಲಿ ಇಲ್ಲಿನ ಸಣ್ಣ ಸಣ್ಣ ಭಾಷೆಗಳ ಸಂರಕ್ಷಣೆ ಬಗ್ಗೆ ಪುಸ್ತಕ ಹೊರತರುವ ಮೂಲಕ ಶ್ರಮಿಸಲಾಗಿದೆ ಎಂದರು.


ಭಾಷೆಯು ಸಂವಹನ ಮಾಧ್ಯಮಕ್ಕೆ ಮೀಸಲಾಗಿಲ್ಲ. ಭಾವನಾತ್ಮಕ ಬದುಕಿನ ಜೀವನದ ಮೂಲ ಶಿಲೆಯಾಗಿದೆ ಎಂಬುದನ್ನು ಮರೆಯುವಂತಿಲ್ಲ ಎಂದ ಅವರು, ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ಪ್ರತಿಯೊಬ್ಬರ ನಾಗರಿಕರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಕನ್ನಡ ಶಾಲೆಗಳ ಉಳಿವಿಗೆ ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವಂತಾಗಬೇಕು ಎಂದು ಹೇಳಿದರು.