ಜಿಲ್ಲೆ

ಸಮ್ಮೇಳನಕ್ಕೆ ಚುರುಕಿನ ಪ್ರಚಾರ ಕೊಡಿ

Kalaburagi

ಕಲಬುರಗಿ: ಫೆ.5, 6 ಮತ್ತು 7ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಇನ್ನೂ ಚುರುಕಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮದವರ ಸಹಕಾರ ಅಗತ್ಯ ಎಂದು ಚಿಂಚೋಳಿ ಶಾಸಕ ಹಾಗೂ ಸಮ್ಮೇಳನದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಡಾ. ಅವಿನಾಶ ಜಾಧವ್ ಮನವಿ ಮಾಡಿದರು.
ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಮತ್ತು ಮೆರವಣಿಗೆ ಸಮಿತಿಯ ಆಮಂತ್ರಣ ಪತ್ರಿಕೆಯನ್ನು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, 26ರಿಂದಲೇ ಚಿಂಚೋಳಿಯ ಬಸ್ ಸ್ಟ್ಯಾಂಡ್, ಪ್ರಮುಖ ಬೀದಿಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗಿದೆ ಎಂದರು.
ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ ವಾನತಿ ಮಾತನಾಡಿ, ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಕಲಾ ಪ್ರದರ್ಶನ ಪ್ರದರ್ಶಿಸಲು ಒಟ್ಟು 122 ಕಲಾ ತಂಡಗಳು ಸಿದ್ಧವಾಗಿವೆ. ಇದರಲ್ಲಿ ಜಿಲ್ಲೆಯ ಹೆಚ್ಚು ಕಲಾ ತಂಡಗಳು ಭಾಗವಹಿಸಲಿವೆ. ಭರತನಾಟ್ಯ, ಜಾನಪದ ನೃತ್ಯ, ನಾಟಕ, ಸುಗಮ ಸಂಗೀತ, ರಸಮಂಜರಿ, ವಚನ ಗಾಯನ, ಕೊಳಲುವಾದನ, ಭಾವಗೀತೆ ಹೀಗೆ ಪ್ರತಿ ವಿಧದಲ್ಲೂ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಜಿಲ್ಲಾಧಿಕಾರಿ ಶರತ್ ಬಿ., ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಫೀಕ್ ಲಾಡಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಹಾಗೂ ಸಾಂಸ್ಕೃತಿಕ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 

ಕಲಾಕೃತಿ ಪ್ರದರ್ಶನಕ್ಕೆ ಉಚಿತ ಮಳಿಗೆ
ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರ, ಶಿಲ್ಪ, ಛಾಯಾಚಿತ್ರ ಕಲಾ ಸಂಸ್ಥೆ ಹಾಗೂ ಕಲಾ ಗುಂಪುಗಳು ತಮ್ಮ ಕಲಾಕೃತಿಗಳನ್ನು ಪ್ರದಶರ್ಿಸಲು ಉಚಿತ ಮಳಿಗೆಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಅರ್ಜಿ  ಆಹ್ವಾನಿಸಲಾಗಿದೆ ಎಂದು ಚಿತ್ರಕಲಾ ಪ್ರದರ್ಶನ ಸಮಿತಿ ಕಾರ್ಯಾಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ. ರಾಚಪ್ಪ ತಿಳಿಸಿದ್ದಾರೆ. ಕಲಾಕೃತಿಗಳನ್ನು ಪ್ರದರ್ಶಿಸಲು 40 ಮಳಿಗೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇಚ್ಛೆಯುಳ್ಳ ಸಂಸ್ಥೆ ಹಾಗೂ ಗುಂಪುಗಳು ಸಂಪೂರ್ಣ ಮಾಹಿತಿಯೊಂದಿಗೆ 31ರೊಳಗಾಗಿ ಸ್ಟೇಷನ್ ರಸ್ತೆಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅರ್ಜಿ  ಸಲ್ಲಿಸಬೇಕು. ಮಳಿಗೆಗಳನ್ನು ನೀಡುವ ಅಂತಿಮ ನಿಧರ್ಾರ ಆಯ್ಕೆ ಸಮಿತಿಗೆ ಇರುತ್ತದೆ. ಮಾಹಿತಿಗಾಗಿ ದೂ. 08472-278672, ಮೊ. 95910 45623ಗೆ ಸಂಪರ್ಕಿಸಲು ಕೋರಲಾಗಿದೆ.