ಕಲಬುರಗಿ: ಮೂರು ದಶಕದ ನಂತರ ತೊಗರಿ ಕಣಜದಲ್ಲಿ ಬುಧವಾರದಿಂದ ಮೂರು ದಿನ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಕಟೌಟ್, ಬ್ಯಾನರ್, ವಿದ್ಯುತ್ ದೀಪಾಲಂಕಾರ, ನಾಡ ಧ್ವಜಗಳೊಂದಿಗೆ ಮಹಾನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ನಗರವನ್ನು ಸ್ವಚ್ಛ ಮತ್ತು ಸೌಂದರ್ಯದ ಜತೆಗೆ ಅಲ್ಲಲ್ಲಿ ಹಿರಿಯ ಸಾಹಿತಿಗಳ ಭಾವಚಿತ್ರ, ರಸ್ತೆ ಬದಿ ಗೋಡೆ ಬರಹ ಕಾಣಿಸುತ್ತಿದೆ. ಕನ್ನಡಾಭಿಮಾನಿಗಳನ್ನು ಸೆಳೆಯಲು ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಶ್ರವ್ಯ ಮಾಧ್ಯಮ ಮೂಲಕ ಭರ್ಜರಿ ಪ್ರಚಾರ ನಡೆದಿದೆ. ಸೂಪರ್ ಮಾಕರ್ೆಟ್ ಬಸ್ ನಿಲ್ದಾಣ, ಯಾದಗಿರಿ, ಬೀದರ್, ರಾಯಚೂರು ಸೇರಿ ಈ ಭಾಗದ ಬಹುತೇಕ ನಗರ, ಪಟ್ಟಣಗಳ ಹಾಗೂ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಟಮರ್ಿನಲ್ಗಳಲ್ಲೂ ಶ್ರವ್ಯ ಮಾಧ್ಯಮದ ಪ್ರಚಾರ ನಡೆದಿದೆ. ಅರ್ಧ ತಾಸಿಗೊಮ್ಮೆ 30 ಸೆಕೆಂಡ್ ಆಡಿಯೋ ಕ್ಲಿಪ್ ಮೂಲಕ ನುಡಿ ಜಾತ್ರೆಗೆ ಬನ್ನಿ ಎಂದು ಆಹ್ವಾನ ನೀಡಲಾಗುತ್ತಿದೆ.
ಸಮ್ಮೇಳಾಧ್ಯಕ್ಷರ ಮೆರವಣಿಗೆ
ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ, ಚಿಂತಕ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ಮೆರವಣಿಗೆ ಡಾ.ಎಸ್.ಎಂ. ಪಂಡಿತ ರಂಗಮಂದಿರದಿಂದ ಭಾನುವಾರ ಬೆಳಗ್ಗೆ 8.30ಕ್ಕೆ ಹೊರಡಲಿದೆ. ಜಿಲ್ಲೆಯ 23 ಕಲಾ ತಂಡಗಳು ಸೇರಿ ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರ, ದಾವಣಗೆರೆ, ಧಾರವಾಡ, ಬಳ್ಳಾರಿ, ಬಾಗಲಕೋಟೆ, ಮಂಡ್ಯ, ರಾಯಚೂರು, ಶಿವಮೊಗ್ಗ, ಹಾಸನ, ಆಂಧ್ರ ಗಡಿನಾಡು ಘಟಕ, ಹಾಸನ, ಉಡುಪಿ ಸೇರಿ ವಿವಿಧ ಜಿಲ್ಲೆಗಳ 60 ಕಲಾ ತಂಡಗಳ ಸಾಂಸ್ಕೃತಿಕ ವೈಭವ ಗಮನ ಸೆಳೆಯಲಿದೆ.
ಪುಸ್ತಕ ಪ್ರದರ್ಶನ, ಮಳಿಗೆ
ಸಮ್ಮೇಳನದಲ್ಲಿ ವಾಣಿಜ್ಯ 193 ಮಳಿಗೆ, 415 ಪುಸ್ತಕ ಮಳಿಗೆಗಳು ಇರಲಿವೆ. ಎರಡು ಕಡೆ ಲೇಖಕರ ಕಟ್ಟೆಗೆ ವ್ಯವಸ್ಥೆ ಮಾಡಲಾಗಿದ್ದು, ಚಂದ್ರಶೇಖರ ಕಂಬಾರ, ಸಿದ್ದಲಿಂಗಯ್ಯ, ಎಚ್.ಎಸ್. ವೆಂಕಟೇಶಮೂರ್ತಿ ಸೇರಿ ಹಿರಿಯ ಸಾಹಿತಿಗಳು ಇಲ್ಲಿ ಸೇರಿ ಚರ್ಚೆ ನಡೆಸಲಿದ್ದಾರೆ. ಧೂಳುರಹಿತ ಗ್ರೀನ್ ಮ್ಯಾಟ್, 80 ಸ್ವಯಂ ಸೇವಕರು, ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ಕಸಾಪ ಪ್ರಕಟಿಸಿದ ಕೃತಿಗಳು ಶೇ.50 ರಿಯಾಯಿತಿ ದರದಲ್ಲಿ ಸಿಗಲಿವೆ. ಈವರೆಗೆ 22250 ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದು, 72 ವಿಶೇಷ ಪ್ರತಿನಿಧಿಗಳಿಗೆ ಬ್ರೀಫ್ಕೇಸ್, ಸಾಮಾನ್ಯ ಪ್ರತಿನಿಧಿಗಳಿಗೆ ಪರಿಸರ ಸ್ನೇಹಿ ಬ್ಯಾಗ್, ಪೆನ್, ಬ್ಯಾಡ್ಜ್ ಮತ್ತು ನೋಟ್ಬುಕ್ ಒಳಗೊಂಡ ಕಿಟ್ ವಿತರಿಸಲಾಗುತ್ತಿದೆ.
ದೇಸಿ ಊಟ
ಸಮ್ಮೇಳನದಲ್ಲಿ 4 ಲಕ್ಷ ಜನ ಭಾಗವಹಿಸಬಹುದು ಎಂಬ ನಿರೀಕ್ಷೆಯೊಂದಿಗೆ ಅಡುಗೆ ಸಿದ್ಧತೆ ನಡೆದಿದೆ. ಊಟಕ್ಕಾಗಿ 200 ಕೌಂಟರ್ ಮಾಡಲಾಗುತ್ತಿದ್ದು, 1300 ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಕೌಂಟರ್ಗೆ ಒಬ್ಬ ಬಿ ಗ್ರೂಪ್, ಇಬ್ಬರು ಸಿ ಗ್ರೂಪ್ ಸಿಬ್ಬಂದಿ ನೇಮಿಸಲಾಗಿದೆ. 50 ಕೌಂಟರ್ಗೆ ಒಬ್ಬ ಅಧಿಕಾರಿ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ. 1300 ಸ್ವಯಂ ಸೇವಕರಿದ್ದು, 50 ಸ್ವಯಂ ಸೇವಕರಿಗೆ ಒಬ್ಬ ಅಧಿಕಾರಿ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ. ಸಕರ್ಾರಿ ಪದವಿ ಮಹಾವಿದ್ಯಾಲಯದ ವಿದ್ಯಾಥರ್ಿಗಳನ್ನು ಸ್ವಯಂ ಸೇವಕರಾಗಿ ನೇಮಿಸಿ ಅವರ ಕರ್ತವ್ಯದ ಬಗ್ಗೆ ಮಾಹಿತಿ ನೀಡಲಾಗಿದೆ. ಮಾಧ್ಯಮ ಮಿತ್ರರು, ಅಂಗವಿಕಲರು, ವಿಐಪಿ, ಮಹಿಳೆಯರು, 21800 ನೋಂದಾಯಿತ ಸದಸ್ಯರಿಗೆ ಪ್ರತ್ಯೇಕ ಕೌಂಟರ್ ಮಾಡಲಾಗುತ್ತಿದೆ.
ಗುಲ್ಬರ್ಗ ವಿವಿ ಆವರಣದಲ್ಲಿ ಒಂದು ಪ್ರಮುಖ ವೇದಿಕೆ, ಎರಡು ಸಮಾನಾಂತರ ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿವೆ. ಮುಖ್ಯ ವೇದಿಕೆ ಅತಿ ಆಕರ್ಷಕವಾಗಿ ನಿರ್ಮಿಸಲಾಗಿದೆ. ಪುಸ್ತಕ ಮಳಿಗೆ, ಆಹಾರ ಹೀಗೆ ಯಾವುದೇ ತೆರನಾದ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.
| ರಾಜಶೇಖರ ಹತಗುಂದಿ
ಗೌರವ ಕಾರ್ಯದರ್ಶಿ, ಕಸಾಪ ಬೆಂಗಳೂರು
ಈಗಿನ ಸಿದ್ಧತೆ ಗಮನಿಸಿದರೆ ಐತಿಹಾಸಿಕ ಸಮ್ಮೇಳನವಾಗಲಿದೆ. ನಾಡಿನ ಜನ ಸಹಕಾರ ನೀಡುತ್ತಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಜನಪ್ರತಿನಿಧಿಗಳು ಎಲ್ಲರೂ ತಮ್ಮ ಮನೆ ಕಾರ್ಯಕ್ರಮದಂತೆ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಮೂರು ದಿನದ ನುಡಿ ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸುತ್ತಾರೆ ಎಂಬ ವಿಶ್ವಾಸವಿದೆ.
| ವೀರಭದ್ರ ಸಿಂಪಿ
ಜಿಲ್ಲಾಧ್ಯಕ್ಷ, ಕಸಾಪ ಕಲಬುರಗಿ
ಜಯತೀರ್ಥ ಪಾಟೀಲ