ವಿಜಯವಾಣಿ ಸುದ್ದಿಜಾಲ ಗದಗ
ಡಾ. ಸಿದ್ದಯ್ಯ ಪುರಾಣಿಕ ರಚಿತ ಸಾಹಿತ್ಯಗಳು "ಮೊದಲು ನೀ ಮಾನವನಾಗು' ಎಂಬ ನುಡಿಗಟ್ಟನ್ನು ನೆನಪಿಸುತ್ತವೆ. ಪುರಾಣಿಕರು ಬಹುಮುಖ ಪ್ರತಿಭೆ ಉಳ್ಳವರು. ಬಹುಭಾಷಾ ಪಂಡಿತ, ವಾಗ್ಮಿ ಚಿಂತನಶೀಲರು ಹಾಗೂ ಸರಳ ಸಜ್ಜನಿಕೆ ವ್ಯಕ್ತಿತ್ವದಸ್ವಭಾವ. ಸಾಹಿತ್ಯ ಲೋಕಕ್ಕೆ ಹಲವು ಕೊಡುಗೆ ನೀಡಿದ್ದಾರೆ ಎಂದು ಪ್ರಾಧ್ಯಾಪಕ ಡಾ. ನಾಗರಾಜ ಬಳಿಗೇರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತೋಂಟದಾರ್ಯ ಮಠದ ಕನ್ನಡ ಭವನದಲ್ಲಿ ಇತ್ತೀಚೆಗೆ ಜರುಗಿದ ಸಾಹಿತ್ಯ ಸಿಂಚನ ಮಾಲಿಕೆಯಲ್ಲಿ ಸಿದ್ದಯ್ಯ ಪುರಾಣಿಕ ರಚಿತ ವಚನೋದ್ಯಾನ ಕೃತಿಯ ಕುರಿತು ಉಪನ್ಯಾಸ ನಿಡಿದರು ಅವರು, ಸ್ವತಂತ್ರಸಿದ್ದೇಶ್ವರ ಸಿದ್ಧೇಶ್ವರ ಎನ್ನುವ ಪುರಾಣಿಕರ ವಚನಗಳ ಅಂಕಿತ. ಪುರಾಣಿಕರ ವಚನಗಳಲ್ಲಿ ಆಧುನಿಕ ಬದುಕಿನ ಮುಖ್ಯ ಲಣಗಳಾದ ಸ್ವಾತಂತ್ರ್ಯತೆ, ಧೀರಗುಣಗಳನ್ನು ಕಾಣಬಹುದು. ಕವಿಯ ಕಾಲ ದೃಷ್ಟಿಯನ್ನು ಬಿಂಬಿಸುವ ವಚನಗಳಲ್ಲಿ ಕಾಣಬಹುದು. ಗತಕಾಲವೆ ನಿನ್ನನ್ನು ಪ್ರೀತಿಸಬಲ್ಲೆ ಪೂಜಿಸಲಾರೆ, ವರ್ತಮಾನವೆ ನಿನ್ನನ್ನು ಆದರಿಸಬಲ್ಲೆ ಅಚಿರ್ಸಲಾರೆ, ನಾನು ಭವಿಷತ್ತೆ ನಿನ್ನನ್ನು ಸ್ವಾಗತಿಸಬಲ್ಲೆ ಸಮಾರಾಧಿಸಲಾರೆ ಎನ್ನುತ್ತಾರೆ ಪುರಾಣಿಕರು ಎಂದು ಸ್ಮರಿಸಿದರು.
ಅಧ್ಯತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ ಕವಿಯಾಗಿ, ದ ಆಡಳಿತಗಾರರಾಗಿ ಕರ್ನಾಟಕದ ಸಾರ್ವತ್ರಿಕ ಜೀವನದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ ಮೂಡಿಸಿರುವ ಸಿದ್ದಯ್ಯ ಪುರಾಣಿಕರು ಹೈದರಾಬಾದ ಕರ್ನಾಟಕದ ಕನ್ನಡ ಕಾವ್ಯ ಪರಂಪರೆಯಲ್ಲಿ ಮುಖ್ಯರಾಗಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ರೂಪಗೊಂಡ ವಚನ ಚಳುವಳಿಯ ಭಾಗವಾಗಿರುವ ವಚನ ಸಾಹಿತ್ಯ ಪರಂಪರೆಯನ್ನು ಆಧುನಿಕ ವಚನಗಳ ರೂಪದಲ್ಲಿ ಸಾಹಿತ್ಯ ಕೃಷಿ ಮಾಡಿದ್ದು ನೂತನ ಪ್ರಯೋಗ ಎಂದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಪ್ರೌಢಶಾಲೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯಾಧ್ಯಾಪಕ ಶಿವನಗೌಡ ಗೌಡರ ಹಾಗೂ ಕೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ 27 ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಪ್ರೊ. ಗಂಗಾಧರ ಹಕಾರಿ ಅವರನ್ನು ಸನ್ಮಾನಿಸಲಾಯಿತು.
ಡಾ. ನಾಗರಾಜ ಬಳಿಗೇರ, ಪ್ರೊ. ಅನ್ನದಾನಿ ಹಿರೇಮಠ, ಶಿವನಗೌಡ ಗೌಡರ, ಪ್ರೊ. ಗಂಗಾಧರ ಹಕಾರಿ, ಶಿವಾನಂದ ಗಿಡ್ನಂದಿ ಪ್ರೊ. ಕಿಶೋರಬಾಬು ನಾಗರಕಟ್ಟಿ, ಡಾ. ದತ್ತಪ್ರಸನ್ನ ಪಾಟೀಲ ಹಲವರು ಇದ್ದರು.