ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೀಡಲಾಗುವ 2025ನೇ ಸಾಲಿನ ‘ಪಂಕಜಶ್ರೀ ಪ್ರಶಸ್ತಿ’ಗೆ ಕಥೆಗಾರ್ತಿ ಮಿತ್ರಾ ವೆಂಕಟ್ರಾಜ ಆಯ್ಕೆಯಾಗಿದ್ದಾರೆ. ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರಾದ ಎ. ಪಂಕಜ ಅವರು ಕಸಾಪ ಬಗೆಗಿನ ಗೌರವದಿಂದ ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಪ್ರತಿವರ್ಷ ಅತ್ಯುತ್ತಮ ಲೇಖಕಿಯೊಬ್ಬರಿಗೆ ಪುರಸ್ಕರಿಸಲಾಗುತ್ತಿದೆ. ಮಿತ್ರಾ ವೆಂಕಟ್ರಾಜ ಕುಂದಾಪುರ ಮೂಲದವರು. ವಿವಾಹವಾಗಿ ಮುಂಬೈನಲ್ಲಿ ನೆಲೆಸಿದ ನಂತರ ಸಾಹಿತ್ಯ ಕೃಷಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ‘ರುಕುಮಾಯಿ’, ‘ಹಕ್ಕಿ ಮತ್ತು ಅವಳು’ ‘ಮಾಯಕದ ಸತ್ಯ’ ಮತ್ತಿತರ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.