ಯಡ್ರಾಮಿ ಗಡಿಯಲ್ಲಿ ಬರ ಮಾಡಿದ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಕಸಾಪ ಅಧ್ಯಕ್ಷ ಸಜ್ಜನ ಬಳಗ
ಕಲಬುರಗಿ ::ಸಕ್ಕರೆ ನಾಡು ಮಂಡ್ಯದಲ್ಲಿ ಬರುವ ಡಿಸೆಂಬರ್ 20 ರಿಂದ 22ರ ವರೆಗೆ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಪ್ರಚಾರ ನೀಡಲು ಹಾಗೂ ಸಮಸ್ತ ನಾಡಿನ ಜನತೆಗೆ ನುಡಿ ಸಮ್ಮೇಳನಕ್ಕೆ ಸ್ವಾಗತಿಸಲು ಗುರುವಾರ ವಿಜಯಪುರ ಜಿಲ್ಲೆ ಮಾರ್ಗವಾಗಿ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮೂಲಕ ಜಿಲ್ಲೆಗೆ ಕನ್ನಡ ರಥ ಪ್ರವೇಶಿದೆ.
ಕನ್ನಡ ಜ್ಯೋತಿ ಹೊತ್ತ ರಥಕ್ಕೆ ಜಿಲ್ಲಾಡಳಿತ ಪರವಾಗಿ ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜೇವರ್ಗಿ ತಹಶೀಲ್ದಾರ ಮಲ್ಲಿಕಾರ್ಜುನ ಅವರು ಸ್ವಾಗತಿಸಿ ಗೌರವದಿಂದ ಬರಮಾಡಿಕೊಂಡರು. ಕನ್ನಡಪರ ಹೋರಾಟಗಾರರು, ಇತರೆ ಸಿಬ್ಬಂದಿ ವರ್ಗ ಇದ್ದರು.
ನಾಡ ದೇವತೆ ಶ್ರೀ ಭುವನೇಶ್ವರಿ ದೇವಿ ದೇವಾಲಯದ ಆಕಾರದಲ್ಲಿರುವ ರಥ ಯಾತ್ರೆಯು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಿಂದ ಆರಂಭಗೊಂಡಿದ್ದು, ನಾಡಿನುದ್ದಕ್ಕು ಸಂಚರಿಸಿ ಸಮ್ಮೇಳನದ ಉದ್ಘಾಟನೆ ದಿನದಂದು ಮರಳಿ ಮಂಡ್ಯಕ್ಕೆ ತಲುಪಲಿದೆ.