ಹುಮನಾಬಾದ್: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥ ಜ್ಯೋತಿ ಯಾತ್ರೆಗೆ ಶನಿವಾರ ಪಟ್ಟಣದಲ್ಲಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ರಥಯಾತ್ರೆ ಮೆರವಣಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಚಾಲನೆ ನೀಡಿ ಮಾತನಾಡಿ, ಕನ್ನಡ ರಥಯಾತ್ರೆ ಜಾಗ್ರತೆಯ ಸಂಕೇತ. ಅನ್ಯಭಾಷೆ ಗೌರವಿಸೋಣ ಮಾತೃ ಭಾಷೆ ಪ್ರೀತಿಸೋಣ. ನಮ್ಮ ಮಕ್ಕಳಿಗೆ ತಾಯಿ ಭಾಷೆ ಕಲಿಸೋಣ ಕನ್ನಡ ಶಾಲೆ ಉಳಿಸುವ ಮುಖಾಂತರ ಕನ್ನಡ ಅಭಿಮಾನ ಬೆಳೆಸುವ ಕಾರ್ಯ ನಾವೆಲ್ಲರೂ ಮಾಡೋಣ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ತಾಯಿ ಭವನೇಶ್ವರಿಗೆ ಪೂಜೆ ಸಲ್ಲಿಸಿ ಮಾತನಾಡಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ನಮ್ಮ ತಾಲೂಕಿನಲ್ಲಿ ಸಂಚರಿಸುತ್ತಿರುವದು ಸಂತಸ ತಂದಿದೆ. ಕಸಾಪ ಹೀಗೆ ಅನೇಕ ಕನ್ನಡ ಪರ ಕಾರ್ಯಕ್ರಮ ನಿರಂತರ ಮಾಡಲಿ ಎಂದು ಶುಭ ಕೋರಿದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶಟ್ಟಿ ಪ್ರಾಸ್ತಾವಿಕದರು. ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕರ, ಉಪಾಧ್ಯಕ್ಷ ಮುಕ್ರಮ್ ಝಾ, ಮಾಜಿ ಶಾಸಕ ಸುಭಾಷ ಕಲ್ಲೂರ, ತಹಸೀಲ್ದಾರ್ ಅಂಜುಮ್ ತಬಸ್ಸುಮ್, ಕಸಾಪ ತಾಲೂಕಾಧ್ಯಕ್ಷ ಸಿದ್ದಲಿಂಗ ನಿರ್ಣಾ, ಪ್ರಮುಖರಾದ ಡಾ.ಗೋವಿಂದ, ವೆಂಕಟೇಶ ಗುಡಾಳ, ಶಿವಕುಮಾರ ಸಿದ್ದೇಶ್ವರ, ರವೀಂದ್ರರೆಡ್ಡಿ ಮಾಲಿಪಾಟೀಲ್, ಮುರಗೇಂದ್ರ ಸಜ್ಜನಶೆಟ್ಟಿ , ಮಡೆಪ್ಪ ಕುಂಬಾರ , ಡಾ.ನಾಗನಾಥ ಹುಲಸೂರೆ, ಮಾಣಿಕಪ್ಪ ಬಕ್ಕನ ಹಾಗೂ ಅಧಿಕಾರಿಗಳು, ಕನ್ನಡ ಅಭಿಮಾನಿಗಳು ಇತರರಿದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ನಾನಾ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.