ನಿಡಗುಂದಿ ಪಟ್ಟಣಕ್ಕೆ ಆಗಮಿಸಿದ ಕನ್ನಡಾಂಬೆ ಜ್ಯೋತಿಯನ್ನು ಹೊತ್ತು ಬಂದ ರಥಕ್ಕೆ ತಾಲೂಕು ಆಡಳಿತ, ಕಸಾಪ, ಕನ್ನಡಪರ ಸಂಟನೆಗಳು, ಕನ್ನಡಾಭಿಮಾನಿಗಳು ಬರಮಾಡಿಕೊಂಡರು. ತಹಸೀಲ್ದಾರ್​ ಎ.ಡಿ ಅಮರವಾದಗಿ, ಕಸಾಪ ಜಿಲ್ಲಾಧ್ಯ ಹಾಸಿಂಪೀರ ವಾಲಿಕಾರ ಇತರರಿದ್ದರು. 
ಜಿಲ್ಲೆ

ನಿಡಗುಂದಿಯಲ್ಲಿ ಕನ್ನಡ ರಥಯಾತ್ರೆ

ಗಿರೀಶ ಸಗರ

ನಿಡಗುಂದಿ: ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥ ಮಂಗಳವಾರ ಪಟ್ಟಣಕ್ಕೆ ಆಗಮಿಸಿತು.

ತಹಸೀಲ್ದಾರ್​ ಎ.ಡಿ ಅಮರವಾದಗಿ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ. ತನ್ನದೇ ಆದ ನೆಲ, ಜಲ, ಸಂಸತಿಯ ಹಿರಿಮೆ ಒಳಗೊಂಡಿದೆ ಎಂದರು.

ಕಸಾಪ ಜಿಲ್ಲಾಧ್ಯ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯ ಸಂಗಮೇಶ ಕೆಂಭಾವಿ ಮಾತನಾಡಿ, ಡಿ.20ರಿಂದ 22ರವರೆಗೆ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥವು 87 ದಿನಗಳ ಕಾಲ ರಾಜ್ಯದ 240 ತಾಲೂಕುಗಳಲ್ಲಿ ಸಂಚರಿಸಲಿದೆ ಎಂದರು.

ಕಾಲೇಜು ರಸ್ತೆ, ಆಲಮಟ್ಟಿ ರಸ್ತೆ ಮೂಲಕ ರಥವು ಮುದ್ದೇಬಿಹಾಳ ಕ್ರಾಸ್​ ತಲುಪಿತು.