ತಾವರಗೇರಾದಲ್ಲಿ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಬಿಸಾಬ ಖುದನವರ , ಶರಣಬಸವೇಶ್ವರ, ಸಾಗರ ಭೇರಿ, ಸಂಜೀವ ಚಲವಾದಿ, ನಾಗರಾಜ ಕೋಟಗಿ ಇತರರಿದ್ದರು. 
ಜಿಲ್ಲೆ

ಕನ್ನಡ ರಥಯಾತ್ರೆಯ ಅದ್ದೂರಿ ಮೆರವಣಿಗೆ

Kopala - Desk - Eraveni

ತಾವರಗೇರಾ: ಪಟ್ಟಣದಲ್ಲಿ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ ಮೆರವಣಿಗೆ ಸೋಮವಾರ ಅದ್ದೂರಿಯಾಗಿ ನಡೆಯಿತು.

ಅಂಬೇಡ್ಕರ್ ವೃತ್ತದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಹಾಗೂ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜ್ಯೋತಿ ರಥಯಾತ್ರೆಗೆ ಪಪಂ ಮುಖ್ಯಾಧಿಕಾರಿ ನಬಿಸಾಬ ಖುದನವರ್ ಹಾಗೂ ನಾಡ ತಹಸೀಲ್ದಾರ್ ಶರಣಬಸವೇಶ್ವರ ಕಳ್ಳಿಮಠ ಜಂಟಿಯಾಗಿ ಚಾಲನೆ ನೀಡಿದರು.

ಮುಖ್ಯ ವೃತ್ತಗಳನ್ನು ಸುತ್ತಿದ ಮೆರವಣಿಗೆಯಲ್ಲಿ ಕುಂಭ ಹಾಗೂ ಕಳಶ ಹೊತ್ತ ಮಹಿಳೆಯರು, ಕುರುಹಿನ ಶೆಟ್ಟಿ ಸಮುದಾಯದ ಮಹಿಳೆಯರಿಂದ ಕೋಲಾಟ, ಭಜನೆ, ಬುಡ್ಗ ಜಂಗಮ ಕಲಾವಿದರಿಂದ ವಿವಿಧ ವೇಷಭೂಷಣ ಪ್ರದರ್ಶನ, ಡೊಳ್ಳುಕುಣಿತ, ಹಲಿಗೆ ವಾದನ, ನೃತ್ಯ ಪ್ರದರ್ಶನ,

ಶಾಲಾ ಮಕ್ಕಳಿಂದ ರಾಷ್ಟ್ರೀಯ ನಾಯಕರ ವೇಷಭೂಷಣ, ಸುಮಾರು ಸಾವಿರಾರು ವಿದ್ಯಾರ್ಥಿಗಳ 200 ಮೀಟರ್ ಉದ್ದದ ಕನ್ನಡ ಧ್ವಜದ ಪ್ರದರ್ಶನ ಗಮನಸೆಳೆಯಿತು.

ಪಿಎಸ್‌ಐ ನಾಗರಾಜ್ ಕೋಟಗಿ, ಕನ್ನಡ ಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಸಾಗರ ಭೇರಿ, ಕರವೇ ಪದಾಧಿಕಾರಿಗಳಾದ ಸಂಜೀವ ಚಲುವಾದಿ, ಅಮರೇಶ ಕುಂಬಾರ, ಶ್ಯಾಮೂರ್ತಿ ಅಂಚಿ, ಸಿದ್ದನಗೌಡ ಪುಂಡಗೌಡರ್, ಚನ್ನಪ್ಪ ನಾಲತವಾಡ, ವಕೀಲ ಕಳಕನಗೌಡ ಪಾಟೀಲ್,

ಕಸಾಪ ಅಧ್ಯಕ್ಷ ರವಿಂದ್ರ ಬಳಿಗೇರ, ಶಸಾಪ ಅಧ್ಯಕ್ಷ ಬಸವರಾಜ ದೇವರಮನಿ, ಮಾಜಿ ಅಧ್ಯಕ್ಷ ಅಮರೇಶ ಗಲಗಲಿ, ಪ್ರಿ.ಡಾ.ಸುಭಾಷ್ ಪೋರೆ , ಪ್ರಿ.ಲಕ್ಷ್ಮಣಸಿಂಗ, ಪ್ರಿ.ಆರ್.ಜಿ.ಅಂಬಿಗೇರ, ಮುಖ್ಯ ಗುರು ಪರಸಪ್ಪ ಇತರರಿದ್ದರು.