ಅವರ್ತಿ ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು. ನವೀನ್‌ಕುಮಾರ್, ಕೆ.ಎಸ್.ನಾಗೇಶ್, ಲೀಲಾಕುಮಾರಿ ತೊಡಿಕಾನ, ಶೇಖರ್, ಆರ್.ಮಹದೇವಪ್ಪ, ಎಂ.ಆರ್.ಗುರುಮೂರ್ತಿ, ಎ.ಎಸ್.ಅಪ್ಪಾಜಪ್ಪ, ರೇಣುಕಾಸ್ವಾಮಿ ಇದ್ದರು.  
ಜಿಲ್ಲೆ

ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಬಳಸುವವರ ಸಂಖ್ಯೆ ಕ್ಷೀಣ

ಅಭಿನಯ್ ಎಚ್.ಎಂ

ಕುಶಾಲನಗರ: ಕನ್ನಡ ಭಾಷೆ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಾಗಿದ್ದು, ಕನ್ನಡಕ್ಕೆ ತನ್ನದೆ ಆದ ವಿಶೇಷ ಶಕ್ತಿಯಿದೆ ಎಂದು ಅನುಗ್ರಹ ಕಾಲೇಜಿನ ಕನ್ನಡ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಅವರ್ತಿ ಘಟಕದ ವತಿಯಿಂದ ಸೋಮವಾರ ಅವರ್ತಿ ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಕನ್ನಡದ ಬಗ್ಗೆ ಅವರಿಗಿದ್ದ ಅಭಿಮಾನ, ಪ್ರೀತಿಯಿಂದ ಪರಿಷತ್ ಸ್ಥಾಪನೆಯಾಯಿತು. ಕನ್ನಡ ಭಾಷೆಯ ಸೆಳೆತಕ್ಕೆ ಒಳಗಾಗಿ ಬೇರೆ ಭಾಷೆ ಸಾಹಿತಿಗಳು ಕನ್ನಡದಲ್ಲಿ ಪುಸ್ತಕ ಬರೆದರು ಎಂದರು.
ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಇತ್ತೀಚೆಗೆ ಕನ್ನಡ ಬಳಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಬಳಸುವ ಮೂಲಕ ಭಾಷೆ ಉಳಿಸಬೇಕು ಎಂದರು.

ಕಸಾಪ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ನವೀನ್‌ಕುಮಾರ್ ಮಾತನಾಡಿ, ಕನ್ನಡ ಈಗಲೂ ಗ್ರಾಮೀಣ ಭಾಗದಲ್ಲಿ ಅದ್ಭುತವಾಗಿದೆ. ನಗರ ಪ್ರದೇಶಗಳಲ್ಲಿ ಬೇರೆ ಭಾಷೆಯ ಒತ್ತಡಕ್ಕೆ ಬಿದ್ದು ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತ್ತಿದೆ. ಕನ್ನಡಿಗರು ಉದಾರ ಮನಸ್ಸಿನವರು. ಕನ್ನಡದ ಶಕ್ತಿ ತಿಳಿಯಬೇಕೆಂದರೆ ಜನಪದ ಸಾಹಿತ್ಯ ಕೇಳಬೇಕು ಎಂದು ಹೇಳಿದರು.

ಕಸಾಪ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಕನ್ನಡ ಭಾಷೆ ಇತರ ದೇಶ ಮತ್ತು ರಾಜ್ಯಗಳ ನಾಗರಿಕರನ್ನು ಆಕರ್ಷಿಸುತ್ತಿದೆ. ಅಲ್ಲದೇ, ಕನ್ನಡ ಸಾಹಿತ್ಯಕ್ಕೆ ತನ್ನದೆ ಆದ ಶ್ರೀಮಂತಿಕ್ಕೆ ಇದೆ ಎಂದು ತಿಳಿಸಿದರು.

ಕಸಾಪ ಅವರ್ತಿ ಘಟಕದ ಅಧ್ಯಕ್ಷ ಶೇಖರ್, ಹಾರ್ನಳ್ಳಿ ಹೋಬಳಿ ಕಸಾಪ ಅಧ್ಯಕ್ಷ ಆರ್.ಮಹದೇವಪ್ಪ, ಗ್ರಾಮದ ಯಜಮಾನ ಎಂ.ಆರ್.ಗುರುಮೂರ್ತಿ, ರಾಜರಾಜೇಶ್ವರಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಎ.ಎಸ್.ಅಪ್ಪಾಜಪ್ಪ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರೇಣುಕಾಸ್ವಾಮಿ, ದಿಲೀಪ್, ಧರ್ಮ ಇತರರಿದ್ದರು.