ಶಿರಸಿ: ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಕೊಳಗಿಬೀಸ್ ಘಟಕದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನ.9ರಂದು ಬೆಳಗ್ಗೆ 8.30ರಿಂದ ಕೊಳಗಿಬೀಸ್ ಮಾರುತಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಗೋಳಿಯ ಶ್ರೀ ಸಿದ್ಧಿವಿನಾಯಕ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಕನ್ನಡಾಂಬೆಯ ಸ್ಥಬ್ಧಚಿತ್ರ ಹಾಗೂ ಡೊಳ್ಳು ಕುಣಿತದೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕರವೇ ಜನಧ್ವನಿ ಗೌರವಾಧ್ಯಕ್ಷ ಶ್ರೀಧರ ಮಡಿವಾಳ ಮಣಿಗಾರ, ಡಿವೈಎಸ್ಪಿ ಕೆ.ಎಲ್. ಗಣೇಶ, ಮಾರುತಿ ದೇವಾಲಯದ ಅರ್ಚಕ ವಿ.ಕುಮಾರ ಭಟ್, ಮನು ವಿಕಾಸ ಸಂಸ್ಥೆಯ ಗಣಪತಿ ಭಟ್, ಸಾಮಾಜಿಕ ಕಾರ್ಯಕರ್ತರ ಅನಂತಮೂರ್ತಿ ಹೆಗಡೆ, ಇತರರು ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಕರವೇ ಜನಧ್ವನಿ ಜಿಲ್ಲಾಧ್ಯಕ್ಷ ಉಮಾಕಾಂತ ಹೊಸ್ಕಟ್ಟಾ ವಹಿಸಲಿದ್ದಾರೆ.
ಮಾಧ್ಯಮ ಕ್ಷೇತ್ರದಿಂದ ವಿಜಯವಾಣಿ ವರದಿಗಾರ ಮಂಜುನಾಥ ಸಾಯೀಮನೆ, ವೈದ್ಯಕೀಯ ಕ್ಷೇತ್ರದ ಡಾ. ಪ್ರಮೋದ ಅಮ್ಮಿನಳ್ಳಿ, ಡಾ. ಬಿ.ಬಿ. ನರಗುಂದ, ಡಾ. ಶಿವರಾಮ ನಾ. ಹೆಗಡೆ ಅವರನ್ನು, ಸಾಮಾಜಿಕ ಕ್ಷೇತ್ರದಿಂದ ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್, ಕಾನಸೂರು ಉಪ ವಲಯಾರಣ್ಯಾಧಿಕಾರಿ ವಿಶ್ವನಾಥ ನಾಯ್ಕ, ಶಿಕ್ಷಣದಲ್ಲಿ ಸಾಧನೆ ತೋರಿದ ಚಿನ್ಮಯಿ ಹೆಗಡೆ ದೊಡ್ಮನೆ, ತೃಪ್ತಿ ಗೌಡ ಮಳಲಿ, ಚೈತನ್ಯ ಹೆಗಡೆ ಹೊಸ್ಮನೆ, ಹರಿಕೃಷ್ಣ ಗೌಡ, ರಕ್ಷಿತಾ ಗೌಡ ಹಾಗೂ ಚಿನ್ಮಯ ಜೋಗಳೇಕರ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.