ಜಿಲ್ಲೆ

ಆರ್ಟ್ ಆಫ್ ಲಿವಿಂಗ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬೆಂಗಳೂರು: ಶ್ರೀರವಿಶಂಕರ್ ಅವರ ದಿವ್ಯ ಸಾನ್ನಿಧ್ಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಶುಕ್ರವಾರ (ನ.೨೪) ರಂದು ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಆಚರಿಸಲಾಗುತ್ತಿದೆ.
ಮಧ್ಯಾಹ್ನ ೧೨ ಗಂಟೆಯಿಂದ ವಿಶೇಷವಾದ ಆಹಾರ ಮೇಳದೊಂದಿಗೆ ಸಂಭ್ರಮಾಚರಣೆಗಳು ಆರಂಭವಾಗಲಿದೆ. ಮುಳಬಾಗಿಲು ದೋಸೆ, ಅಕ್ಕಿ ತರಿ ಕಡುಬು, ಗಿರ್ಮಿಟ್ ಹಾಗೂ ಮೆಣಸಿನ ಬಜ್ಜಿ, ಒತ್ತು ಶ್ಯಾವಿಗೆ, ರಾಗಿ ರೊಟ್ಟಿ, ಅಕ್ಕಿ ರೊಟ್ಟಿ, ಜೋಳದ ರೊಟ್ಟಿ ಇವೇ ಮೊದಲಾದ ಸಾಂಪ್ರದಾಯಿಕ ಕರ್ನಾಟಕ ಖಾದ್ಯಗಳನ್ನು ಈ ಆಹಾರ ಮೇಳವು ಉಣಬಡಿಸಲಿದೆ. ಸಿಹಿತಿಂಡಿ ಪ್ರಿಯರಿಗೆ, ವಿಶೇಷವಾದ ಎ೨ ಹಾಲಿನ ಸಿಹಿತಿಂಡಿಗಳು ಹಾಗೂ ಆರ್ಗ್ಯಾನಿಕ್ ಐಸ್ ಕ್ರೀಂಗಳು ದೊರೆಯುವ ಕೌಂಟರ್ ಕೂಡಾ ಇರುತ್ತದೆ.
ಸಹಸ್ರ ಕಂಠ ಗಾಯನ ಕಾರ್ಯಕ್ರಮದಲ್ಲಿ ೧೦೦೮ ಗಾಯಕರಿಂದ ನಾಡಗೀತೆ, ಜಾನಪದ ಗೀತೆ ಹಾಗೂ ಭಾವಗೀತೆಗಳ ಗಾಯನ ಇರುತ್ತದೆ. ವಿವಿಧ ತಂಡಗಳಿಂದ ಡೊಳ್ಳು ಕುಣಿತ, ನಂದಿ ಧ್ವಜ, ಪೂಜಾ ಕುಣಿತ ಮುಂತಾದ ಜಾನಪದ ಪ್ರಾಕಾರಗಳ ಪ್ರದರ್ಶನ ಇರುತ್ತದೆ.
ಗುರುದೇವರೊಂದಿಗಿನ ವಿಶೇಷ ಸತ್ಸಂಗವು ಈ ಸಂಧ್ಯೆಯ ಮುಖ್ಯ ಆಕರ್ಷಣೆಯಾಗಿರಲಿದೆ.

ವಿಳಾಸ:
ಕನಕಪುರ ರಸ್ತೆಯಲ್ಲಿ ನಡೆಯಲಿರುವ, ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರ, ಉಚಿತ ಪ್ರವೇಶ, ಸಮಯ: ಸಂಜೆ ೫:೩೦ ರಿಂದ ೯:೩೦ ರವರೆಗೆ