ಮೈಸೂರು: ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ), ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆರ್. ಆನಂದ್, ಗೌರವ ಕಾರ್ಯದರ್ಶಿ ಎ.ಕೆ. ಶಿವಾಜಿ ರಾವ್, ಗೌರವ ಖಜಾಂಚಿ ಎಸ್.ಜೆ.ಅಶೋಕ್, ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಸ್. ಮಹದೇವ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ವೈಸ್‌ನ ಅಧ್ಯಕ್ಷ ವಸಂತಕುಮಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ. ಕುಮಾರ್, ಪ್ರತಾಪ್ ಕುಮಾರ್, ರವೀಂದ್ರಸ್ವಾಮಿ, ಶ್ರೀಶೈಲ ರಾಮಣ್ಣನವರ್, ಆರ್.ಎನ್. ರಮೇಶ್ ಇತರರು ಇದ್ದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ:
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ರಂಗರಾವ್ ಕೃಷ್ಣ, ವರ್ಷ ಅಸೋಸಿಯೇಟ್ಸ್ ನ ವಿ.ಎನ್. ನಿಧಿಶ್ರೀ, ಕಾವೇರಿ ಾಸ್ಟ್ ಫುಡ್‌ನ ಪ್ರಭಾಕರ್, ದೇವರಾಜ ಮಾರುಕಟ್ಟೆಯ ದಿನಸಿ ವರ್ತಕ ಆನಂದ್ ಕುಮಾರ್, ಮೈಸೂರು ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಎಂ.ಬಿ. ಬಸವರಾಜು, ಲೆಕ್ಕ ಪರಿಶೋಧಕ ನೀರಜ್ ಮಿತ್ರನ್ ಅವರನ್ನು ಸನ್ಮಾನಿಸಲಾಯಿತು.
ಮೈಸೂರಿನ ಹೆಬ್ಬಾಳು, ಯಾದವಗಿರಿ, ಮೇಟಗಳ್ಳಿ ಕೈಗಾರಿಕಾ ಪ್ರದೇಶಗಳ ಸಂಘಗಳ ಪದಾಧಿಕಾರಿಗಳು, ಮೈಸೂರು ಡಿಸ್ಟ್ರಿಕ್ಟ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ವಿವಿಧ ಸಂಘ, ಸಂಸ್ಥೆಗಳ ಮುಖಂಡರು, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಹಿಳಾ ವಿಭಾಗದ ಪದಾಧಿಕಾರಿಗಳು, ಉದ್ಯಮಿಗಳು, ವ್ಯಾಪಾರಸ್ಥರು ಇದ್ದರು.