ಜಿಲ್ಲೆ

ಭಾಷಾ ನೀತಿ ರೂಪಿಸಲು ಸಮಿತಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಾಜ್ಯದಲ್ಲಿ 230 ಸಣ್ಣ ಭಾಷೆಗಳಿದ್ದು, ಇವುಗಳನ್ನು ರಸುವ ನಿಟ್ಟಿನಲ್ಲಿ ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವರದಿ ಆಧಾರದಲ್ಲಿ ಕರ್ನಾಟಕದಲ್ಲಿ ಭಾಷಾ ನೀತಿ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಭಾಷೆಗಳು ಮಾತನಾಡುವವರಿಲ್ಲದೆ ನಶಿಸಿ ಹೋಗಿವೆ. ಈ ನಿಟ್ಟಿನಲ್ಲಿ ಸಣ್ಣ ಭಾಷೆ ಉಳಿಸಲು ಕಾರ್ಯಯೋಜನೆ ರೂಪಿಸಲಾಗುವುದು ಎಂದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಪತನಮುಖಿಯಾಗಿದ್ದು, ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಸರ್ಕಾರ ಪಬ್ಲಿಕ್​ ಸ್ಕೂಲ್​ಗಳನ್ನು ಪ್ರಾರಂಭಿಸಿದ ಬಳಿಕ ಸರ್ಕಾರಿ ಶಾಲೆಗಳು ಉಳಿದಿವೆ. ಆದರೆ ಕನ್ನಡ ಉಳಿದಿಲ್ಲ. ಹೀಗಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಉಡುಪಿ ಜಿಲ್ಲೆಯಲ್ಲಿ ಕನ್ನಡ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ಜಿಲ್ಲೆಯಲ್ಲಿ 2 ಅಥವಾ 3 ತಿಂಗಳಿಗೊಮ್ಮೆ ಕನ್ನಡ ಪರ ಸಂಟನೆಗಳೊಂದಿಗೆ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ಕೆಡಿಪಿ ಸಭೆಗಳನ್ನು ಕನ್ನಡಕ್ಕೆ ಸಂಬಂಧಪಟ್ಟ ಅಜೆಂಡಾ ಕೊನೆಯಲ್ಲಿ ಸೇರಿಸಲಾಗುತ್ತದೆ. ಇದರಿಂದ ಸಮಗ್ರ ಚರ್ಚೆ ಸಾಧ್ಯವಾಗುತ್ತಿಲ್ಲ ಹೀಗಾಗಿ ಕನ್ನಡ ಅನುಷ್ಠಾನಕ್ಕೆ ಸಂಬಂಧಪಟ್ಟ ಅಜೆಂಡಾಕ್ಕೆ ಮೊದಲ ಪ್ರಾಶಸ ನೀಡುವಂತೆ ತಿಳಿಸಲಾಗಿದೆ ಎಂದರು.

ಕನ್ನಡದಲ್ಲಿ ಮಾಹಿತಿ 

ಕರಾವಳಿ ಭಾಗದಲ್ಲಿರುವ ಪ್ರವಾಸಿ ತಾಣಗಳಲ್ಲಿ ಕನ್ನಡದಲ್ಲಿ ಮಾಹಿತಿ ಲಕಗಳನ್ನು ಅಳವಡಿಸಬೇಕು. ಜೊತೆಗೆ ಎಎಸ್​ಐ ಸಂರತ ಸ್ಮಾರಕಗಳು, ದೇವಸ್ಥಾನಗಳಲ್ಲಿ ಆಯಾ ಸ್ಥಳಗಳ ಮಹತ್ವ ಮತ್ತು ಹಿನ್ನೆಲೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಹಾಕುವಂತೆ ಕೇಂದ್ರ ಸಚಿವರಿಗೆ ಮನವಿ ನೀಡಲಾಗಿದೆ ಎಂದರು.

ಭಾಷಾ ಕಲಿಕಾ ಕೇಂದ್ರ

ಅನ್ಯಭಾಷಿಕರು ಹೆಚ್ಚು ವಾಸಮಾಡುವ ಪ್ರದೇಶಗಳಲ್ಲಿ ಭಾಷಾ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ 12,000ಕ್ಕೂ ಅಧಿಕ ಮಂದಿ ಹೊರ ರಾಜ್ಯದವರಿದ್ದು, ಕನ್ನಡ ಕಲಿಕಾ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿ ಸೂಚನೆ ನೀಡಲಾಗಿದೆ ಎಂದರು.

ಕನ್ನಡ ಭವನ

ನಗರದಲ್ಲಿ ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಈಗಾಗಲೇ 11 ಸೆಂಟ್ಸ್​ ಜಾಗವನ್ನು ಗುರುತಿಸಲಾಗಿದ್ದು, ಸಾಹಿತ್ಯ ಪರಿಷತ್​ ಬಳಿ 56 ಲಕ್ಷ ರೂ. ಪ್ರಾರಂಭಿಕ ನಿಧಿ ಇದೆ. ಭವನಕ್ಕೆ 5 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಮುಂದಿನ ಬಜೆಟ್​ನಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುವುದು ಎಂದರು.

ಬ್ಯಾಂಕ್​ಗಳಲ್ಲಿ ಸ್ಥಳಿಯ ಭಾಷೆಗೆ ಆದ್ಯತೆ

ರಾಜ್ಯದಲ್ಲಿ ಬ್ಯಾಂಕ್​ ಉದ್ಯೋಗಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಕಡಿಮೆಯಾಗಿದ್ದರಿಂದ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸ್ಥಳಿಯ ಭಾಷೆ ಬಲ್ಲ ಅಧಿಕಾರಿಗಳು ಕಡಿಮೆ ಇದ್ದಾರೆ. ಈ ವಿಷಯವನ್ನು ಕೇಂದ್ರ ವಿತ್ತ ಸಚಿವರ ಗಮನಕ್ಕೆ ತರಲಾಗಿದ್ದು, ನಿರಂತರ ಒತ್ತಡ ಪರಿಣಾಮವಾಗಿ ಇತ್ತೀಚೆಗೆ 2500 ಮಂದಿ ನೇಮಕಾತಿ ಸಂದರ್ಭದಲ್ಲಿ ಸ್ಥಳಿಯ ಭಾಷೆ ಬಲ್ಲವರಿಗೆ ಆದ್ಯತೆ ನೀಡಲಾಗಿದೆ ಎಂದರು.

ಶಾಲೆಗಳಿಗೆ ಹಕ್ಕುಪತ್ರ ನೀಡಿ

ರಾಜ್ಯದಲ್ಲಿ 3300 ಶತಮಾನ ಕಂಡ ಶಾಲೆಗಳಿವೆ. 7 ಸಾವಿರ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. 17,700 ಶಾಲೆಗಳಿಗೆ ಹಕ್ಕುಪತ್ರ ಇಲ್ಲ. ಹೀಗಾಗಿ ಜಾಗ ಒತ್ತುವರಿಯಾಗುತ್ತಿದೆ. ಉಡುಪಿಯಲ್ಲಿ 8 ಶಾಲೆಗಳು ಮಾತ್ರ ಹಕ್ಕುಪತ್ರ ಹೊಂದಿಲ್ಲ. ಇವುಗಳಿಗೆಲ್ಲಾ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕನ್ನಡದಲ್ಲಿ ಅನುತ್ತೀರ್ಣ ವಿರಳ

ಜಿಲ್ಲೆಯಲ್ಲಿ ತುಳು, ಕೊಂಕಣಿ, ಉರ್ದು, ಹವ್ಯಕ ಕನ್ನಡ ಸಹಿತ ವಿವಿಧ ಮನೆಭಾಷೆಗಳಿದ್ದರೂ ಕನ್ನಡ ಪರೀೆಯಲ್ಲಿ ಅನುತ್ತೀರ್ಣರಾಗಿರುವವರ ಸಂಖ್ಯೆ ವಿರಳವಾಗಿದೆ. ಇದು ಸಂತೋಷಕರ ಸಂಗತಿ. ಕನ್ನಡವೇ ಮನೆಭಾಷೆ, ಸ್ಥಳಿಯ ಭಾಷೆಯಾಗಿದ್ದರೂ ಮೈಸೂರು ಸಹಿತ ವಿವಿಧ ಜಿಲ್ಲೆಗಳಲ್ಲಿ ಕನ್ನಡದಲ್ಲಿ ಉತ್ತೀರ್ಣರಾಗಿರುವರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಈ ವಿಷಯದ ಬಗ್ಗೆ ಅಧ್ಯಯನ ಕೈಗೊಂಡು ಸರ್ಕಾಕ್ಕೆ ವರದಿ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಪ್ರಾಧಿಕಾರದ ಸದಸ್ಯ ಯಾಕೂಬ್​ ಖಾದರ್​, ಕಾರ್ಯದರ್ಶಿ ಡಾ. ಸಂತೋಷ್​ ಹಾನಗಲ್​, ಆಪ್ತ ಕಾರ್ಯದರ್ಶಿ ಟಿ.ಎಸ್​. ಣಿಕುಮಾರ್​, ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.