ಕುಂಬಳೆ: ಗೀತೋಪದೇಶವನ್ನು ಮಾಡುವ ಮೂಲಕ ಶ್ರೀ ಕೃಷ್ಣ ಪರಮಾತ್ಮನು ಅರ್ಜುನನ ಮನಸ್ಸಿನ ಉದ್ವೇಗವನ್ನು ಹೋಗಲಾಡಿಸಿದ್ದಾನೆ. ದೇಶ-ವಿದೇಶಗಳಲ್ಲಿ ಭಗವದ್ಗೀತೆ ಸಜ್ಜನರ ಮನದಲ್ಲಿ ತುಂಬಿ ಅಭಿಯಾನದ ರೂಪದಲ್ಲಿ ಪ್ರಚಲಿತದಲ್ಲಿದೆ. ಕಣಿಪುರದ ಇತಿಹಾಸದಲ್ಲಿ ವಿಶೇಷವಾದ ಕಾರ್ಯಕ್ರಮವಾಗಿ ಭಗವದ್ಗೀತೆಯ ಕನ್ನಡ ಕಾವ್ಯರೂಪ ಹೊರಬಂತು ಎಂದು ವಕೀಲ ಹರಿದಾಸ ಶಂ.ನಾ.ಅಡಿಗ ಕುಂಬಳೆ ಹೇಳಿದರು.
ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಗವದ್ಗೀತೆಯ ಕನ್ನಡ ಕಾವ್ಯರೂಪವನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ನಿತ್ಯಾನಂದ ನಾಯಕ್ ಮತ್ತು ನಿಖಿತಾ ನಾಯಕ್ ದಂಪತಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೆ.ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಪಾಲ್ಗೊಂಡಿದ್ದರು. ಸುಮಾ ಕೋಟೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹೇಶ್ ಕೋಟೆ ವಂದಿಸಿದರು.
ಭಗವದ್ಗೀತೆಯ 700 ಶ್ಲೋಕಗಳನ್ನು ಕನ್ನಡ ಕಾವ್ಯರೂಪದಲ್ಲಿ ಕೆ.ರಾಘವೇಂದ್ರ ಭಟ್ ಕೋಟೆಕಾರು ರಚಿಸಿದ್ದಾರೆ. ಪ್ರಸಿದ್ಧ ಯುವ ಗಾಯಕಿ ಸುಮಾ ಕೋಟೆ, ಪಂಜ ಸುಳ್ಯ ಹಾಡಿದ್ದಾರೆ.