ಸಿಂಧನೂರು ಸುಕಾಲಪೇಟೆಯ ಬಾಲಕಿಯರ ವಸತಿ ನಿಲಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಗರಸಭೆ ಮಾಜಿ ಅಧ್ಯಕ್ಷೆ ಮಂಜುಳಾ ಪಾಟೀಲ್, ವಕೀಲೆ ಸಹನಾ ಹಿರೇಮಠ, ಪ್ರಮುಖರಾದ ಜಿ.ಜೆ.ದೇವಿರಮ್ಮ, ಯಲ್ಲಮ್ಮ ಬಾರಕೇರ, ಲಕ್ಷ್ಮೀ, ಯಲ್ಲಮ್ಮ ಬಾರಕೇರ, ಲಕ್ಷ್ಮೀ, ಕಸಾಪ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಇತರರಿದ್ದರು. 
ಜಿಲ್ಲೆ

ಕನ್ನಡ ಸಾಹಿತ್ಯಕ್ಕೆ ಕಸಾಪ ಕೊಡುಗೆ ಅಪಾರ

ರುದ್ರಪ್ಪ ವಾಲಿ

ಸಿಂಧನೂರು: ಕನ್ನಡ ಸಾಹಿತ್ಯ ಬೆಳವಣಿಗೆಗೆ ಕಸಾಪ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ತಾಲೂಕು ಕಸಾಪ ಉತ್ತಮ ಕೆಲಸ ಮಾಡಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಮಂಜುಳಾ ಪಾಟೀಲ್ ಹೇಳಿದರು.

ಸುಕಾಲಪೇಟೆ ಬಾಲಕಿಯರ ವಸತಿ ನಿಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ಎನ್ನುವುದು ಬುತ್ತಿ ಇದ್ದ ಹಾಗೆ. ಮನೆಯ ಹಿರಿಯರ ಕಾರ್ಯಕ್ರಮ, ಮಕ್ಕಳ ಜನ್ಮದಿನ, ಮದುವೆ ವಾರ್ಷಿಕೋತ್ಸವ ಹಾಗೂ ಸಂಘ ಸಂಸ್ಥೆಗಳ ಹೆಸರಿನಲ್ಲಿ ಪರಿಷತ್ತಿಗೆ ದತ್ತಿ ಕೊಡಬೇಕು. ಇದರಿಂದ ದತ್ತಿ ಉಪನ್ಯಾಸಗಳ ಮೂಲಕ ಕನ್ನಡ ಸಾಹಿತ್ಯ ಬೆಳವಣಿಗೆಗೆ ಕಸಾಪ ಮುಂದಾಗಲಿದೆ. ಈಗಾಗಲೇ ದತ್ತಿ ಕೊಟ್ಟವರ ಹೆಸರಿನಲ್ಲಿ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮಹಿಳಾ ಹಕ್ಕುಗಳು ಹಾಗೂ ಸ್ಥಿತಿಗತಿ ಕುರಿತು ವಕೀಲೆ ಭಾಗ್ಯವತಿ, ಮಹಿಳೆ ಮತ್ತು ಪತ್ರಿಕೆ ಕುರಿತು ಮುಖ್ಯಶಿಕ್ಷಕಿ ರಮಾದೇವಿ ಶಂಭೋಜಿ ಉಪನ್ಯಾಸ ನೀಡಿದರು. ಪ್ರಾಸ್ತಾವಿಕವಾಗಿ ಕಸಾಪ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಮಾತನಾಡಿದರು.

ದತ್ತಿ ದಾನಿಗಳಾದ ವಕೀಲ ಎಸ್.ಎಸ್.ಹಿರೇಮಠ, ವೈ.ನರೇಂದ್ರನಾಥ, ವಾರ್ಡನ್ ಸುವರ್ಣಾ ಇತರರಿದ್ದರು.