ಹನುಮಸಾಗರದ ಕನ್ನಡ ಸಾಹಿತ್ಯ ಭವನದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾಲೋಚನಾ ಸಭೆ ನಡೆಯಿತು. ಸ್ಥಳೀಯ ಘಟಕದ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ಕಾರ್ಯದರ್ಶಿ ಬಸವರಾಜ ದಟ್ಟಿ, ತಾಲೂಕು ಕಸಾಪ ಕಾರ್ಯದರ್ಶಿ ಲೆಂಕಪ್ಪ ವಾಲೀಕಾರ, ಕಸಾಪ ಗೌರವ ಸಲಹೆಗಾರರಾದ ಅಬ್ದುಲ್ ಕರೀಮ್ ವಂಟೆಳಿ, ಅಬ್ದುಲ್‌ರಜಾಕ್ ಟೇಲರ್ ಇತರರಿದ್ದರು. 
ಜಿಲ್ಲೆ

ಎಲ್ಲರ ಸಹಕಾರದಿಂದ ಸಮ್ಮೇಳನ ಯಶಸ್ವಿ; ಮಂಜುನಾಥ ಗುಳೇದಗುಡ್ಡ

Gangavati - Mohan Kumar H R

ಹನುಮಸಾಗರ: ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಕಸಾಪ ಸ್ಥಳೀಯ ಘಟಕದ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ ಮಾತನಾಡಿ, 12ನೇ ಕನ್ನಡ ಸಾಹಿತ್ಯ ಸಮೇಳನದ ಯಶಸ್ವಿಗೆ ಪ್ರತೇಕ್ಷ ಹಾಗೂ ಪರೋಕ್ಷವಾಗಿ ಹಲವರು ಶ್ರಮಿಸಿದ್ದಾರೆ. ಎಲ್ಲರೂ ಜವಾಬ್ದಾರಿಯಿಂದ ಶ್ರಮಿಸಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಸಮ್ಮೇಳನದಲ್ಲಿ ಕೆಲ ಸಣ್ಣಪುಟ್ಟ ಲೋಪದೋಷಗಳ ಬಗ್ಗೆಯೂ ಚರ್ಚಿಸಿ ಆತ್ಮಾವಲೋಕನ ಮಾಡಿಕೊಂಡು ಇನ್ನು ಮುಂದೆ ಈ ರೀತಿ ಲೋಪದೋಷಗಳಾಗದಂತೆ ಎಲ್ಲರೂ ಒಗ್ಗಟ್ಟಾಗಿ ಕನ್ನಡಪರ ಕಾರ್ಯಕ್ರಮಗಳಿಗೆ ಶ್ರಮಿಸೋಣ ಎಂದರು.

ಸಭೆಯಲ್ಲಿ ಲೆಕ್ಕ ಪತ್ರ ಪರಿಶೀಲಿಸಿ ಜಮಾ, ಖರ್ಚು ವೆಚ್ಚಗಳ ಬಗ್ಗೆ ಚರ್ಚಿಸಲಾಯಿತು. ಇದು ಜಿಲ್ಲಾ ಸಮ್ಮೇಳನವಾದ್ದರಿಂದ ಜಿಲ್ಲೆ, ತಾಲೂಕು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳನ್ನೊಳಗೊಂಡಂತೆ ಇನ್ನೊಮ್ಮೆ ಸಭೆ ಸೇರಿ ಖರ್ಚು, ವೆಚ್ಚ ಹಾಗೂ ವಿವಿಧ ವಿಷಯಗಳ ಕುರಿತು ಚರ್ಚಿಸಬೇಕೆಂದು ಹೋಬಳಿ ಘಟಕದ ಹಿರಿಯ ಪದಾಧಿಕಾರಿಗಳು ತಿಳಿಸಿದರು.

ಕಾರ್ಯದರ್ಶಿ ಬಸವರಾಜ ದಟ್ಟಿ, ತಾಲೂಕು ಕಸಾಪ ಕಾರ್ಯದರ್ಶಿ ಲೆಂಕಪ್ಪ ವಾಲೀಕಾರ, ಕಸಾಪ ಗೌರವ ಸಲಹೆಗಾರರಾದ ಅಬ್ದುಲ್ ಕರೀಮ್ ವಂಟೆಳಿ, ಅಬ್ದುಲ್‌ರಜಾಕ್ ಟೇಲರ್, ಶ್ರೀನಿವಾಸ ಜಹಗೀರದಾರ, ರಾಮಚಂದ್ರ ಬಡಿಗೇರ, ವಿಜಯೀಂದ್ರ ಕುಲಕರ್ಣಿ, ಮಹಾಂತೇಶ ಗವಾರಿ, ವೀರೇಶ ವಿಶ್ವಕರ್ಮ, ಶಾಮೀದ ವಾಲಿಕಾರ, ಮಲ್ಲಪ್ಪ ಲಂಗಟದ, ಬಾಳಪ್ಪ ಪತ್ತಾರ, ಏಕನಾಥ ಮೆದಿಕೇರಿ ಇತರರಿದ್ದರು.