ಜಿಲ್ಲೆ

ಬಸವಣ್ಣ ಶರಣರ ಸಾಹಿತ್ಯ ಪ್ರಚಾರಕ

Chitradurga - Desk - Suresh lamani

ಚನ್ನಗಿರಿ: ಇತಿಹಾಸದಲ್ಲಿ ಹನ್ನೆರಡನೇ ಶತಮಾನಕ್ಕೆ ಮಹತ್ವ ನೀಡಲಾಗಿದೆ. ಭಾರತೀಯ ಧರ್ಮ, ತತ್ವಶಾಸ್ತ್ರ ಮತ್ತು ಸಾಹಿತ್ಯದಲ್ಲಿನ ಕ್ರಾಂತಿಗೆ ಸಾಕ್ಷಿಯಾಗಿದೆ. ಆಗ ಶರಣ ಸಾಹಿತ್ಯ ಬೆಳವಣಿಗೆ ಕಂಡಿತು ಎಂದು ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶಕೀಲ್ ಅಹ್ಮದ್ ತಿಳಿಸಿದರು.

ಮಣ್ಣಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ, ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರು ಶರಣ ಸಾಹಿತ್ಯ ಲೋಕದ ಮುಖ್ಯ ಪ್ರಚಾರಕ ಮತ್ತು ಮಾರ್ಗದರ್ಶಕರಾಗಿದ್ದರು. ಜಾತ್ಯತೀತತೆ ತತ್ವಗಳ ಮೇಲೆ ಸಮಾಜದ ಬದಲಾವಣೆಯ ಮಾಧ್ಯಮವಾಗಿ ಸಾಹಿತ್ಯ ವೇದಿಕೆ ತೆಗೆದುಕೊಂಡಿದ್ದರು. ಶರಣರ ಬರಹಗಳು ಶ್ರೀಮಂತ ಅನುಭವದಿಂದ ಆಗಿದೆ. ಮತಾಂಧತೆಯ ಸರಪಳಿಯಿಂದ ಜನರ ಮನಸ್ಸನ್ನು ವಿಮೋಚನೆಗೊಳಿಸುವಲ್ಲಿ ಕೇಂದೀಕೃತವಾಗಿದೆ ಎಂದರು.

ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು 1986ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಶರಣರ ಅದರ್ಶ ಮತ್ತು ಅಚರಣೆಗಳು ವಿಶ್ವದಾದ್ಯಂತ ಹರಡುವ ದೃಷ್ಟಿಕೋನದಿಂದ ಪರಿಷತ್ ಬೆಳೆದು ನಿಂತಿದೆ ಎಂದರು.

ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎಸ್. ಮಲ್ಲೇಶಪ್ಪ, ಉಪನ್ಯಾಸಕರಾದ ಜಯಣ್ಣ, ಪುಷ್ಪ್ಪಲತಾ, ಭೀಮಪ್ಪ, ಎನ್.ಎಸ್. ರಾಜಪ್ಪ, ಬಿ.ಎಂ. ಶಿವಲಿಂಗಪ್ಪ, ಎಂ.ಇ. ನಾಗರಾಜ್ ಇತರರು ಇದ್ದರು.