ಸಂಡೂರು: ಅನೇಕರ ತ್ಯಾಗದಿಂದ ಕರ್ನಾಟಕ ಉದಯವಾಗಿದೆ. ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಬೇಕು ಎಂದು ನೂತನ ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ತಾಳೂರು ಸರ್ಕಾರಿ ಪ್ರೌಢಶಾಲೆ, ಸಹಿಪ್ರಾ ಶಾಲೆ, ಹರ್ಷ ಶಾಲೆ ಸಹಯೋಗದೊಂದಿಗೆ ತಾಳೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಬಾಷೆಯನ್ನು ಪ್ರೀತಿಸಬೇಕು, ಆರಾಧಿಸಬೇಕು ಎಂದರು. 200ಮೀ. ಉದ್ದದ ಕನ್ನಡ ಬಾವುಟ, ಕವಿಗಳು, ಸಾಹಿತಿಗಳು, ಹೋರಾಟಗಾರರು, ಅನೇಕರ ಸ್ತಬ್ಧ ಚಿತ್ರಗಳು, ವಿವಿಧ ವೇಷ ಭೂಷಣ ಹಾಕಿದ್ದ ಚಿಣ್ಣರಿಂದ ಮೆರವಣಿಗೆ ನಡೆಯಿತು.
ಯಕ್ಷಗಾನ, ಕೋಲಾಟ, ಹುಲಿವೇಷ, ಡೊಳ್ಳು ಕುಣಿತ, ವೀರಗಾಸೆ ತಂಡಗಳು ಭಾಗವಹಿಸಿದ್ದವು. ಸಂಡೂರು ಪುರಸಭೆ ಅಧ್ಯಕ್ಷ ಎಸ್.ಸಿರಾಜ್, ಬಿಇಒ ಡಾ.ಐ.ಆರ್.ಅಕ್ಕಿ, ಕ್ಷೇತ್ರ ಸಮನ್ವಯಾಧಿಕಾರಿ ಶರಣಪ್ಪ ಕರಿಶೆಟ್ಟಿ ಇತರರಿದ್ದರು.