ಸಂಕೇಶ್ವರ: ಕನ್ನಡ ಭಾಷೆ ಹೆಚ್ಚು ಬಳಕೆ ಮಾಡುವ ಮೂಲಕ ಬೆಳೆಸಬೇಕು ಎಂದು ನಿಡಸೋಸಿ ದುರದುಂಡೀಶ್ವರ ಮಠದ ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಗಾಂಧಿ ವೃತ್ತದ ವೀರರಾಣಿ ಕಿತ್ತೂರು ಚನ್ನಮ್ಮ ವೇದಿಕೆಯಲ್ಲಿ 70ನೆಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಉದ್ಯೋಗದ ದೃಷ್ಟಿಯಿಂದ ಇಂಗ್ಲಿಷ್ ಕಲಿತರೆ, ಸ್ವಾಭಿಮಾನಕ್ಕಾಗಿ ಹೆಚ್ಚು ಕನ್ನಡ ಮಾತನಾಡಬೇಕು ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಗಜಾನನ ನಾಯ್ಕ ಮಾತನಾಡಿ, ಪಾಲಕರು ಮಕ್ಕಳ ಎದೆಯಲ್ಲಿ ಕನ್ನಡದ ಬೀಜ ಬಿತ್ತಬೇಕು. ಜತೆಗೆ ಪುಸ್ತಕ ಓದುವ ಅಭಿರುಚಿ ಬೆಳೆಸಬೇಕು ಎಂದರು.
ರಾಜ್ಯೋತ್ಸವದ ಯಶಸ್ಸಿಗೆ ಕಾರಣರಾದ ಪ್ರಮುಖರನ್ನು ಸಮಿತಿ ವತಿಯಿಂದ ಸತ್ಕರಿಸಲಾಯಿತು. ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಪಿಐ ಶಿವಶರಣ ಅವಜಿ, ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಪ್ರಮೋದ ಹೊಸಮನಿ, ದೀಲಿಪ ಹೊಸಮನಿ, ಮಹೇಶ ಹಟ್ಟಿಹೋಳಿ, ವಿಜಯಲಕ್ಷ್ಮೀ ಮಿರ್ಜಿ ಇತರರಿದ್ದರು.