ಮೈಸೂರು: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದವನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ನಮ್ಮ ಭಾಷೆ, ಸಂಸ್ಕೃತಿಯನ್ನು ಬೆಳೆಸುವ ವಿಚಾರದಲ್ಲಿ ಕೀಳರಿಮೆ ಮಾಡಬಾರದು ಎಂದು ಕೃಷಿ ಸಚಿವ ಎನ್. ಚೆಲುವರಾಂುಸ್ವಾಮಿ ಹೇಳಿದರು.
ನಗರದ ಸರಸ್ವತಿಪುರಂ ಕಲಾಂಧಿಕ ಭವನದಲ್ಲಿ ಗುರುವಾರ ಕನ್ನಡ ಬೆಳಕು ಸುವರ್ಣ ಕರ್ನಾಟಕ ಸಂಭ್ರಮ 50 ಸಂಸ್ಕರಣಾ ಗ್ರಂಥ ಬಿಡುಗಡೆ ಸವಾರಂಭ ಉದ್ಘಾಟಿಸಿ ವಾತನಾಡಿ, ಕನ್ನಡ ಭಾಷೆಗೆ ದೊಡ್ಡ ಇತಿಹಾಸವಿದೆ. ಹಲವು ಶಾಸನಗಳು, ಸಾಹಿತ್ಯ ಕೃತಿಗಳನ್ನು ಕೊಡುಗೆ ನೀಡುವಲ್ಲಿ ಮೇರುಸ್ಥಾನವನ್ನು ಕನ್ನಡ ಹೊಂದಿದೆ. ಕುವೆಂಪು ದ.ರಾ. ಬೇಂದ್ರೆ ಸೇರಿದಂತೆ ಕನ್ನಡ ಭಾಷೆ ಸಾಹಿತ್ಯ ಏಳಿಗೆಗೆ ಕೊಡುಗೆ ನೀಡಿದ ಅನೇಕ ಮಹನೀಂುರನ್ನು ಸ್ಮರಿಸುವುದು ಪ್ರತಿಂೊಬ್ಬ ಕನ್ನಡಿಗರ ಕರ್ತವ್ಯ ಎಂದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ಕನ್ನಡ ನಾಡಿನ ಜನರು ಇತರೆ ಭಾಗಗಳಿಗೆ ಹೋದರೂ ಕನ್ನಡವನ್ನು ಸಂಭ್ರಮಿಸುವ ಗುಣ ಹೊಂದಿದ್ದಾರೆ. ಐತಿಹಾಸಿಕ ಹಿನ್ನೆಲೆ ಹೊಂದಿದ ಕನ್ನಡದ ಸಂಸ್ಕ ೃತಿಂುನ್ನು ಉನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಕನ್ನಡಾಭಿವಾನಿಗಳು ಶ್ರಮಿಸಬೇಕು ಎಂದರು.
ದಸರಾ ನಾಡಹಬ್ಬ ಬಂತೆಂದರೆ ಮೈಸೂರಿನ ಪ್ರತಿ ಮನೆಮನೆಯಲ್ಲು ಎಲ್ಲಿಲ್ಲದ ಸಡಗರ ಸಂಭ್ರಮ. ನಾವು ಊಟ ಮಾಡುವಂತಹ ತಟ್ಟೆಯಲ್ಲಿ ಸಿಹಿತಿಂಡಿ ತಿನಿಸುಗಳು ಇರುವ ಹಾಗೆಯೇ ಕನ್ನಡ ಹಬ್ಬದಲ್ಲೂ ಇಂತಹ ಸಂಭ್ರಮ ಕಾಣಬೇಕು. ಕರ್ನಾಟಕದಲ್ಲಿ ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ವಾತನಾಡುವ ಶೈಲಿ, ಆಚಾರ-ವಿಚಾರ, ಉಡುಗೆತೊಡುಗೆ ಬದಲಾಗುತ್ತದೆ. ಕರ್ನಾಟಕ ರಾಜ್ಯ ಉದಂುಗೊಂಡು 69 ವರ್ಷ ಕಳೆಯಿತು. ಮೈಸೂರು ರಾಜ್ಯ ಎಂದು ಕರೆಂುಲಾಗುತ್ತಿದ್ದ ರಾಜ್ಯಕ್ಕೆ 1973ರಲ್ಲಿ ಕರ್ನಾಟಕವೆಂದು ಮರುನಾಮಕರಣ ವಾಡಿದ 50 ವರ್ಷದ ಸಂಭ್ರಮದಲ್ಲಿ ನಾವಿದ್ದೇವೆ’ ಎಂದು ಸ್ಮರಿಸಿದರು.
ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಡಾ.ಬಸವನಗೌಡಪ್ಪ (ವೈದ್ಯಕೀಂು ಕ್ಷೇತ್ರ) ಮುನಿಗೋಪಾಲ್ ರಾಜು (ಆಡಳಿತ), ಟಿ.ತಿಮ್ಮೇಗೌಡ (ಜಾನಪದ) ನಂುನ್ ಕುವಾರ್, (ವೈದ್ಯಕೀಂು), ಎಚ್.ಆರ್. ವಿರೇಶ್ ಕುವಾರ್(ಸವಾಜಸೇವೆ) ಅವರನ್ನು ಸನ್ಮಾನಿಸಲಾಯಿತು.
ಕಾಂರ್ುಕ್ರಮದಲ್ಲಿ ಸಾಹಿತಿ ಅರವಿಂದ ಮಾಲಗತ್ತಿ, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಸ್. ಶಿವರಾಜಪ್ಪ, ಶಾಸಕ ಕೆ.ಹರೀಶ್ ಗೌಡ, ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಎ.ಸಿ.ಜಗದೀಶ್ ಇದ್ದರು.