ನರಗುಂದ: ಕರ್ನಾಟಕ ಬರಹಗಾರರ ಸಂಘ, ಸರಸ್ವತಿ ದೇವಸ್ಥಾನ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕನ್ನಡ ನುಡಿ ವೈಭವ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮ ಮೇ 24ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಸರಸ್ವತಿ ನಗರದ ಸರಸ್ವತಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಭೈರನಹಟ್ಟಿ- ಶಿರೋಳಮಠಗಳ ಪೀಠಾಧಿಪತಿಗಳಾದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಪ್ರಭಾರಿ ದೈಹಿಕ ಪರಿವೀಕ್ಷಕ ಎನ್.ಆರ್. ನಿಡಗುಂದಿ ಉದ್ಘಾಟಿಸುವರು. ಬರಹಗಾರ ಸಂಘದ ಜಿಲ್ಲಾಧ್ಯಕ್ಷೆ ಡಾ.ಕಲಾಶ್ರೀ ಹಾದಿಮನಿ ಅಧ್ಯಕ್ಷತೆ ವಹಿಸುವರು. ಸಂಘದ ಸಂಸ್ಥಾಪಕ ಅಧ್ಯಕ್ಷ ಮಧುನಾಯ್ಕ ಲಂಬಾಣಿ, ನಿವೃತ್ತ ಶಿಕ್ಷಕ ಎಸ್.ಆರ್. ಹಿರೇಮಠ, ಎನ್.ಎ. ಕುರಿ, ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎಸ್.ಜಿ. ಮಣ್ಣೂರಮಠ ಭಾಗಿಯಾಗಲಿದ್ದಾರೆ. ಕಸಾಪ ತಾಲೂಕಾಧ್ಯಕ್ಷ ಪ್ರೊ. ಬಿ.ಸಿ. ಹನುಮಂತಗೌಡ್ರ ಅವರಿಂದ ಉಪನ್ಯಾಸ ಜರುಗಲಿದೆ. ಪದ್ಮಾಜೆ., ಕಬಾಡಿ, ಎಚ್.ವಿ. ಈಟಿ, ಸಿ.ಬಿ. ಸುಬೇದಾರ, ಶೋಭಾ ಆಡಿನ, ತುಳಸಪ್ಪ ಯರಗಟ್ಟಿ, ಸುಕನ್ಯಾ ಸಾಲಿ, ಜಿ.ಬಿ. ಕಂಠೆಣ್ಣವರ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.