ಬಸವನಬಾಗೇವಾಡಿ: ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.2 ರಂದು ಅರ್ಥಪೂರ್ಣವಾಗಿ ಆಚರಿಸೋಣ. ಅಕ್ಷರದ ಹಬ್ಬವನ್ನು ಯಶಸ್ಸಿಗೊಳಿಸೋಣ. ಸರ್ವರು ಭಾಗವಹಿಸಿ ಕನ್ನಡ ಸಾಹಿತ್ಯದ ವಾತಾವರಣ ಸೃಷ್ಟಿಸೋಣ ಎಂದು ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಇವಣಗಿ ಗ್ರಾಮದಲ್ಲಿ ವರದಾನಿ ಲಕ್ಕಮ್ಮ ದೇವಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಇಂತಹ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಯುವ ಜನಾಂಗಕ್ಕೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿರಬೇಕು. ನಾಡು ನುಡಿಗಾಗಿ ಶ್ರಮಿಸಿದ ಮಹನೀಯರನ್ನು ನೆನೆದು ಗೌರವ ಸಲ್ಲಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ವಾಂಸರಿಂದ ವಿಶೇಷ ಗೋಷ್ಠಿಗಳಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಶಿವಯ್ಯ ಹಿರೇಮಠ, ಲಾಯಪ್ಪ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಶಿವಯ್ಯ ಹಿರೇಮಠ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಲತಾ ಬಿರಾದಾರ, ಬಸವರಾಜ ಕಳ್ಳಿಗುಡ್ಡ, ರಾಜೇಸಾಬ ಶಿವನಗುತ್ತಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಅವ್ವನಗೌಡ ಬಿರಾದಾರ. ಕ.ಸಾ.ಪ. ತಾಲೂಕಾಧ್ಯಕ್ಷ ಶಿವಾನಂದ ಡೋಣೂರ, ರಾಮಣ್ಣ ಪೂಜಾರಿ, ಎಸ್.ಎಲ್. ಒಂಕಾರ, ಬಿ.ವಿ. ಚಕ್ರಮನಿ, ಬಸವರಾಜ ಸೋಮಪುರ, ಯಮನಪ್ಪ ಮಿಣಜಗಿ, ಶಿವು ಮಡಿಕೇಶ್ವರ, ಬಸವರಾಜ ಮೇಟಿ, ನಾಗೇಶ ನಾಗೂರ, ವಾಸುದೇವ ಮ್ಯಾಗೇರಿ, ಎಸ್.ಬಿ. ಅಂಕದ, ಎ.ಎ. ಉಪಾಧ್ಯಾಯ, ನಿರ್ಮಲಾ ಅಂಗಡಿ, ಮಹಾದೇವಿ ಬಿರಾದಾರ, ಕೋಟ್ರೇಶ ಹೇಗಡ್ಯಾಳ, ಎಸ್.ಬಿ. ದಳವಾಯಿ, ಸಿ.ಎಲ್. ಮುರಾಳ, ಬಸವರಾಜ ಪೂಜಾರಿ, ಶಂಕರ ಚಕ್ರಮನಿ, ಪರಸಪ್ಪ ಕಳ್ಳಿಗುಡ್ಡ, ಗುರುಸಂಗಪ್ಪ ಕುಂಬಾರ, ಸುಭಾಷ ಚಕ್ರಮನಿ, ಗುರುಲಿಂಗಪ್ಪ ಕುಂಬಾರ, ಸಿದ್ದಪ್ಪ ಅವಟಿ, ಕಾಂತಪ್ಪ ಹಿರೇಕುರಬರ, ಸುರೇಶ ಚಿಗರಿ, ಬಸವರಾಜ ನಾವಿ, ಜಯಶ್ರೀ ಗುಬ್ಬಾ, ಎಚ್.ಬಿ.ಬಾರಿಕಾಯಿ, ಸುಭಾಷಚಂದ್ರ ಹಡಪದ ಇತರರಿದ್ದರು.