ವಿರಾಜಪೇಟೆಯ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ 69ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಡೀನಾ ರೀನಾ ಸಲ್ಡಾನ್ಹಾ, ಮುನೀರ್ ಅಜೀಜ್, ಸಿಬಿ, ನೌಸಾದ್, ನೌಫಲ್, ಲತೀಫ್, ಕಬೀರ್, ನವಾಜ್, ಇದ್ದರು. 
ಜಿಲ್ಲೆ

ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್‌ನಲ್ಲಿ ಕನ್ನಡ ಕಂಪು

ಎಂ.ರವಿ

ವಿರಾಜಪೇಟೆ: ಪಟ್ಟಣದ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಟ್ರಸ್ಟ್ ಸಭಾಂಗಣದಲ್ಲಿ ಶುಕ್ರವಾರ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಮುನೀರ್ ಅಜೀಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಶಿಕ್ಷಕಿ ಡೀನಾ ರೀನಾ ಸಲ್ಡಾನ್ಹಾ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕೆ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೂಡುತ್ತದೆ. ಕನ್ನಡಕ್ಕಾಗಿ ಕಿರು ಬೆರಳು ಎತ್ತಿದರೂ ಸಾಕು ಇಂದು ಅದೇ ಗೋವರ್ಧನ ಗಿರಿಯಾಗುತ್ತದೆ ಎಂದು ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ನೆನಪಿಸುವುದರ ಮೂಲಕ ಶ್ರೀಗಂಧದ ನಾಡು ಹೆಮ್ಮೆಯ ಶಿಲ್ಪಕಲೆಯ ತವರೂರು ಅನೇಕ ಪವಿತ್ರ ನದಿಗಳ ನಾಡು ನಮ್ಮ ಹೆಮ್ಮೆಯ ಕನ್ನಡ ನಾಡು. ಕನ್ನಡ ನಾಡಿನ ಇತಿಹಾಸ ತುಂಬ ಪ್ರಾಚೀನವಾದುದು ಎಂದರು.

ಡೀನಾ ರೀನಾ ಸಲ್ಡಾನ್ಹಾ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಟ್ರಸ್ಟ್ ಉಪಾಧ್ಯಕ್ಷ ಸಿ.ಬಿ., ಕಾರ್ಯದರ್ಶಿ ನೌಸಾದ್, ಖಜಾಂಚಿ ನೌಫಲ್, ಪದಾಧಿಕಾರಿಗಳಾದ ಲತೀಫ್, ಕಬೀರ್, ನವಾಜ್, ಇನ್ನಿತರರು ಉಪಸ್ಥಿತರಿದ್ದರು.