ಜಿಲ್ಲೆ

ಇಡೀ ಜಗತ್ತು ಒಪ್ಪಿಕೊಂಡಿರುವ ಶ್ರೇಷ್ಠ ಭಾಷೆ ಕನ್ನಡ : ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣನೆ

ಮೈಸೂರು: ಕನ್ನಡ ಎಂದರೆ ಮೂಗು ಮುರಿಯುವಂತಾಗಿರುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೇಮ ಬೆಳೆಸಿರುವ ಶಿಕ್ಷಕರನ್ನು ಅಭಿನಂದಿಸಲೇಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ಪರೀಕ್ಷಾ ಸ್ಫೂರ್ತಿ ೌಂಡೇಷನ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಂೋಗದಲ್ಲಿ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಭಾನುವಾರ ಆಂೋಜಿಸಿದ್ದ ರಾಜ್ಯಮಟ್ಟದ ಗುರು ಶ್ರೇಷ್ಠ ಪ್ರಶಸ್ತಿ-2025 ಪ್ರದಾನ ಸವಾರಂಭದಲ್ಲಿ ಪುರಸ್ಕೃತರಿಗೆ ಸನ್ಮಾನ ಮಾಡಿ ಮಾತನಾಡಿದರು.

ಕನ್ನಡದಲ್ಲಿ ಕಲಿತರೆ ಆಗುವುದಿಲ್ಲ ಎನ್ನುವ ಮನಸ್ಥಿತಿ ಬಹುತೇಕರಲ್ಲಿ ಬಂದಿದೆ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕನ್ನಡದ ಪ್ರೇಮ, ಸೆಳೆತ ಮೂಡುವಂತೆ ಮಾಡಿ, ನೂರಕ್ಕೆ ನೂರು ಅಂಕ ಪಡೆಯುವಂತೆ ಮಾಡಿರುವುದು ಸಾಧನೆಯಾಗಿದೆ ಎಂದರು.

ದಿನ ನಿತ್ಯ ನಡೆಯುತ್ತಿರುವ ವಿಷಯ ಹಾಗೂ ವಿಚಾರಗಳನ್ನು ಜನರಿಗೆ ಮುಟ್ಟಿಸುವಂತಹ ಬಹಳ ಸುಲಭದ ಭಾಷೆ ಕನ್ನಡವಾಗಿದೆ. ಕನ್ನಡದ ಹಾಡು, ಜಾನಪದಗಳು ವಿಶ್ವ ಪ್ರಸಿದ್ಧವಾಗಿದ್ದು, ಸಾವಿರಾರು ವರ್ಷಗಳು ಕಳೆದರೂ ಬಾಯಿಂದ ಬಾಯಿಗೆ ಹರಿದು ಬಂದಿದೆ ಎಂದು ಹೇಳಿದರು.

ಜಾನಪದ ಗೀತೆಗಳನ್ನು ಯಾರು ರಚಿಸಿದ್ದರು ಎಂಬುದು ತಿಳಿಯದ್ದಿರೂ ಆಡು ಭಾಷೆಯಲ್ಲಿ ಜನರಿಗೆ ತಲುಪಿಸಲು ಸಹಕಾರಿಯಾಗಿದೆ. ಇದನ್ನು ಇಡೀ ಜಗತ್ತು ಒಪ್ಪಿಕೊಂಡಿದ್ದು, ಶ್ರೇಷ್ಠ ಭಾಷೆ ಕನ್ನಡ ಎಂದು ಅತ್ಯಂತ ಖುಷಿಯಿಂದ ಹೇಳಿ ಕೊಳ್ಳಬಹುದು ಎಂದರು.

ಭಾರತೀಯ ಅನೇಕ ಸ್ಥಳೀಯ ಭಾಷೆಗಳಲ್ಲಿ ಕನ್ನಡ ಭಾಷೆಗೆ ದೊರೆತಷ್ಟು ಜ್ಞಾನಪೀಠ ಪ್ರಶಸ್ತಿಗಳು ಮತ್ತಾವ ಭಾಷೆಗೂ ದೊರೆತಿಲ್ಲ ಅನ್ನುವುದು ಕನ್ನಡಿಗರ ಗರ್ವದ ಸಂಗತಿ. ಕನ್ನಡ ಎಂಬುದು ಒಂದು ಭಾವನಾತ್ಮಕ ಸಂಬಂಧ, ವಿಶೇಷ ರೋಮಾಂಚನ ಎಂದರು.

ಪ್ರಾಚೀನ ಭಾಷೆಯಾಗಿರುವ ಕನ್ನಡಕ್ಕೆ ಎಷ್ಟು ವರ್ಷದ ಇತಿಹಾಸ ಇದೆ ಎನ್ನುವುದು ತಿಳಿದಿಲ್ಲ. ಇಂತಹ ಭಾಷೆಯ ಬಗ್ಗೆ ಮತಿಭ್ರಮಣೆಯಾದವರಂತೆ ತಮಿಳಿನ ಚಲನಚಿತ್ರ ನಟ ಅವಿವೇಕದಿಂದ ಮಾತನಾಡಿದ್ದಾರೆ. ಅಂತಹ ಅವಿವೇಕಿಗಳನ್ನು ಬಿಟ್ಟರೆ ಕನ್ನಡದ ಬಗ್ಗೆ ಮತ್ತಾರಿಗೂ ಅವಹೇಳನಕಾರಿ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಮಾತನಾಡಿ, ಸರ್ಕಾರಿ ಶಾಲೆಗಳಿಗಿಂತ ಹೆಚ್ಚಿನ ಅನುಕೂಲ, ಸೌಕರ್ಯ ಖಾಸಗಿ ಶಾಲೆಗಳಲ್ಲಿ ದೊರೆಯುತ್ತಿರುವುದರಿಂದ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಯಾಕೆ ಓದಿಸಬೇಕು ಎನ್ನುವ ವಾದಕ್ಕೆ ಪಾಲಕರು ತಲುಪಿದ್ದಾರೆ. ಹೀಗಾಗಿ ನೂರಾರು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಓದಿದ ಶಾಲೆಯಲ್ಲಿ ಮಕ್ಕಳಿಲ್ಲದೆ 5 ವರ್ಷದಿಂದ ಮುಚ್ಚಲಾಗಿತ್ತು. ಒಂದು ತಿಂಗಳ ಹಿಂದೆ ಆ ಶಾಲೆಯನ್ನು ಮತ್ತೆ ತೆರೆಯಬೇಕೆಂಬ ಆಶಯದಲ್ಲಿ, ಮನೆ ಮನೆಗೆ ತೆರಳಿ ಪಾಲಕರು ಮನವೊಲಿಸಿ 9 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಸಿದ್ದೆ. ಶಾಲೆಯ ದುರಸ್ತಿ ಹಾಗೂ ಮೂಲ ಸೌಕರ್ಯದ ಕೆಲಸಕ್ಕೆ 7 ಲಕ್ಷ ರೂ. ನೀಡಿ ಶಾಲೆ ಪುನರಾರಂಭಿಸಿದ್ದೆವು. ವಿಪರ್ಯಾಸವೆಂದರೆ ಒಂದು ಮಗು ಸಹ ಶಾಲೆಗೆ ಬರಲಿಲ್ಲ. ಇದು ಬಹಳ ಮನಸ್ಸಿಗೆ ನೋವನ್ನುಂಟು ಮಾಡಿತ್ತು. ಇಂತಹ ಸ್ಥಿತಿಗೆ ಯಾರು ಕಾರಣ ಎಂದು ಬೇಸರದಿಂದ ನುಡಿದರು.

ಮತ್ತೊಂದೆಡೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಕನ್ನಡವೇ ಇಲ್ಲದಂತಾಗಿದೆ. ಪರಭಾಷಿಗರ ಹಾವಳಿಯಿಂದ ಕನ್ನಡ ಕ್ಷೀಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಮಾಯವಾದರೂ ಅಚ್ಚರಿಯಿಲ್ಲ ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗ ಉಪ ನಿರ್ದೇಶಕ ಬಿ.ನಿರಂಜನ ಮೂರ್ತಿ ‘ಪರೀಕ್ಷಾ ಸ್ಫೂರ್ತಿ’ ಪುಸ್ತಕ ಬಿಡುಗಡೆ ಮಾಡಿದರು.‘ಕನ್ನಡ ವ್ಯಾಕರಣ ಸಂಪದ’ ಕೃತಿಯನ್ನು ಕಸಾಪ ಜಿಲ್ಲಾ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಲೋಕಾರ್ಪಣೆಗೊಳಿಸಿದರು.

ರಾಜ್ಯದ 171 ಜನ ಕನ್ನಡ ಶಿಕ್ಷಕರಿಗೆ ‘ರಾಜ್ಯ ಮಟ್ಟದ ಗುರು ಶ್ರೇಷ್ಠ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಇಫಿಮೆಡ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎ.ಸುಧೀಂದ್ರ, ಪರೀಕ್ಷಾ ಸ್ಫೂರ್ತಿ ೌಂಡೇಷನ್ ಅಧ್ಯಕ್ಷ ಂೋಗೀಶ್ ಚುಂಚನಹಳ್ಳಿ ಇತರರು ಇದ್ದರು.