ಜಿಲ್ಲೆ

ಕನ್ನಡ ನಾಡು ಶಿಲ್ಪಕಲೆಗೆ ಹೆಸರುವಾಸಿ

ಉತ್ತರ ಕನ್ನಡ ಡೆಸ್ಕ್

ಮುಂಡರಗಿ: ಪ್ರಾಚೀನ ಕಾಲದಿಂದಲೂ ಶಿಲ್ಪಕಲೆಗೆ ನಮ್ಮ ನಾಡು ಹೆಸರುವಾಸಿಯಾಗಿದೆ. ಕಾಡುಗಲ್ಲಿನಲ್ಲಿ ಅತ್ಯದ್ಭುತ ಕೆತ್ತನೆ ಮೂಲಕ ಜಗತ್ತಿಗೆ ಶಿಲ್ಪಕಲೆಯನ್ನು ಪರಿಚಯಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ ಎಂದು ಶಿಲ್ಪಿ ವೆಂಕಟೇಶ ಸುತಾರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಕುಶಲಕರ್ವಿು ಈಶಣ್ಣ ಬಡಿಗೇರ ಮಾತನಾಡಿ, ಉಳಿಯ ಸ್ಪರ್ಶ ನೀಡಿ ಸುಂದರ ರೂಪದ ಮೂಲಕ ಜಕಣಾಚಾರಿ ಅವರು ಕಲ್ಲುಗಳಿಗೆ ಅಮರತ್ವ ನೀಡಿದರು. ಸದಾ ಶಿಲ್ಪಕಲೆಯ ಧ್ಯಾನ ಮಾಡುತ್ತಿದ್ದ ಜಕಣಾಚಾರಿ ಅವರು ತಮ್ಮ ಶಿಲ್ಪಕಲೆಯ ಮೂಲಕ ಅಜರಾಮರರಾಗಿದ್ದಾರೆ. ಕಲೆಯು ಸಾಧಕರಿಗೆ ಮಾತ್ರ ಒಲಿಯುತ್ತದೆ ಎನ್ನುವುದಕ್ಕೆ ಜಕಣಾಚಾರಿ ಸಾಕ್ಷಿಯಾಗಿದ್ದಾರೆ ಎಂದರು.

ಗ್ರೇಡ್-2 ತಹಸೀಲ್ದಾರ್ ಕೆ.ರಾಧಾ ಮಾತನಾಡಿದರು. ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ದೇವಪ್ಪ ಬರದೂರ, ರಾಘವೇಂದ್ರ ಕಮ್ಮಾರ, ಲಿಂಗರಾಜ ಕಮ್ಮಾರ, ಬಾಳೇಶ ಬಡಿಗೇರ, ದೇವಪ್ಪ ಬಡಿಗೇರ ಇದ್ದರು.