ಜಿಲ್ಲೆ

ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಕಾಂಗ್ರೆಸ್ ಮುಖಂಡ ಕೆ.ಕೆ.ರಾಧಾಕೃಷ್ಣ ಕೀಲಾರ ಕರೆ

reportermys

ಮಂಡ್ಯ: ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್‌ಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಕೆ.ರಾಧಾಕೃಷ್ಣ ಕೀಲಾರ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಸಮಿತಿ ಬೆಂಗಳೂರು ಹಾಗೂ ಮಂಡ್ಯ ಘಟಕದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡದ ಹಬ್ಬ ಕಾರ್ಯಕ್ರಮದಲ್ಲಿ ವಾತನಾಡಿದರು.

ಮಂಡ್ಯ ಜಿಲ್ಲೆಯ ಜನರ ಕನ್ನಡ ಭಾಷಾಭಿವಾನ ಇತರರಿಗೆ ವಾದರಿ. ನಮ್ಮ ನೆಲ, ಜಲ, ಭಾಷೆಯ ಉಳಿವಿಗೆ ನಾವೆಲ್ಲರೂ ಶ್ರದ್ಧೆಯಿಂದ ಕಾರ್ಯಪ್ರವೃತ್ತರಾಗಬೇಕು. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬಾರದಂತೆ ನೆರೆಹೊರೆಯ ರಾಜ್ಯಗಳು ಕಾರ್ಯನಿರ್ವಹಿಸಬೇಕು. ನಮ್ಮ ವಾತೃ ಭಾಷೆ ಕನ್ನಡದ ಉನ್ನತಿ ಹಾಗೂ ನಾಡಿನ ನೆಲ, ಜಲದ ಉಳಿವಿಗೆ ಕಟಿಬದ್ಧರಾಗಬೇಕು ಎಂದರು.

ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ವಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಕಾಣುವ ದೇಶ ನಮ್ಮದಾಗಿದೆ. ಆಟೋ ಚಾಲಕರ ಕನ್ನಡ ಪ್ರೇಮ ಅನನ್ಯ. ಕನ್ನಡ ಭಾಷೆಯನ್ನು ಹೆಚ್ಚು ಬಳಸುವುದರಿಂದ ಅಭಿವೃದ್ಧಿ ಹೊಂದುತ್ತದೆ. ಅನ್ಯ ಭಾಷೆಯ ವ್ಯಕ್ತಿಗಳ ಜತೆ ಕನ್ನಡದಲ್ಲೇ ವಾತನಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕೆಂದು ಕಿವಿವಾತು ಹೇಳಿದರು.

ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹಿಂದಿ ಏರಿಕೆಗೆ ಮುಂದಾದಾಗ ಮೊದಲು ಪ್ರತಿಭಟಿಸಿದ ರಾಜ್ಯಗಳು ಕೇರಳ ಮತ್ತು ತಮಿಳುನಾಡು. ಆ ರಾಜ್ಯಗಳ ವಾದರಿಯಲ್ಲಿ ನಾವೂ ಪ್ರಾದೇಶಿಕ ಭಾಷೆಯ ಉಳಿವಿಗೆ ಶ್ರಮಿಸಬೇಕಿದೆ. ವಿಶ್ವದ ಹಲವೆಡೆ ನೆಲೆಸಿರುವ ಕನ್ನಡಿಗರು ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುತ್ತಿರುವುದು ನಮ್ಮ ಭಾಷೆಯ ಹೆಮ್ಮೆ ಎಂದು ಬಣ್ಣಿಸಿದರು.

ನಗರಸಭೆ ವಾಜಿ ಸದಸ್ಯ ಆಟೋ ನಾಗರಾಜು, ಚಲನಚಿತ್ರ ನಟರಾದ ಚಂದು ಬಿ.ಗೌಡ, ರಂಜನ್, ಕೆ.ಎಂ.ರಾಜಣ್ಣ, ಬಿ.ಎನ್.ರಾಜೇಶ್, ಜಿ.ಎಸ್.ನಾಗಮಣಿ, ಅರುಣ್ ಕುವಾರ್, ಸುಜಾತಾಮಣಿ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕಾಳಿಕಾಂಬ ದೇವಸ್ಥಾನದಿಂದ ಜಾನಪದ ಕಲಾತಂಡಗಳೊಂದಿಗೆ ನೂರಾರು ಆಟೋಗಳು ಕನ್ನಡ ಬಾವುಟ ಕಟ್ಟಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅಂಬೇಡ್ಕರ್ ಭವನ ತಲುಪಿದವು.