ಜಿಲ್ಲೆ

ಅಣ್ಣಾವ್ರು, ಅಪ್ಪು, ರಾಘಣ್ಣ ಜತೆಗೆ ಕುಳಿತು ಊಟ ಮಾಡುವ ಫೋಟೋ ಹಂಚಿಕೊಂಡ ಜಮೀರ್ ಅಹ್ಮದ್‌! Kannada film industry Legends

 ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಡಾ. ರಾಜ್‌ಕುಮಾರ್  ( Dr.Rajkumar ) ಅವರು ತಮ್ಮ ಮಕ್ಕಳಾದ ಪುನೀತ್ ರಾಜ್‌ಕುಮಾರ್ ( Puneeth Rajkumar ), ರಾಘವೇಂದ್ರ ರಾಜ್‌ಕುಮಾರ್ ಅವರ ಜತೆ ಕುಳಿತು ಊಟ ಮಾಡುತ್ತಿರುವ ಫೋಟೋವನ್ನು ( Kannada film industry Legends) ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಜಮೀರ್ ಅಹ್ಮದ್ ಖಾನ್ ಅವರು, ಡಾ. ರಾಜ್‌ಕುಮಾರ್ , ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್​ಕುಮಾರ್​ ಅವರಿಗೆ ಸ್ವತಃ ಊಟ ಬಡಿಸುತ್ತಿದ್ದಾರೆ. ಚಿಕನ್, ಮಟನ್ , ಕಬಾಬ್, ಮುದ್ದೆ ಸಲಾಡ್‌ಗಳು ಟೇಬಲ್ ತುಂಬಾ ಕಾಣುತ್ತಿದೆ.

ಅಣ್ಣಾವ್ರು, ಅಪ್ಪು, ರಾಘಣ್ಣ ಜತೆಗೆ ಕುಳಿತು ಊಟ ಮಾಡುವ ಫೋಟೋ : 

ಕನ್ನಡ ಚಿತ್ರರಂಗದ ಲೆಜೆಂಡ್ಸ್ ದಿವಂಗತ ಡಾ.ರಾಜ್‌ಕುಮಾರ್ ಜಿ ಮತ್ತು ದಿವಂಗತ ಶ್ರೀ.ಪುನೀತ್ ಕುಮಾರ್ ಅವರೊಂದಿಗೆ ಮರೆಯಲಾಗದ ಕೆಲವು ಸುವರ್ಣ ನೆನಪುಗಳು ಎಂದು ಬರೆದುಕೊಂಡು ಎರಡು ಫೋಟೋವನ್ನು ಟ್ವೀಟ್​ ಮಾಡಿದ್ದಾರೆ. ಈ ಫೋಟೋ ಸಖತ್​ ವೈರಲ್​​ ಆಗಿದೆ. ಯಾವ ಸಂದರ್ಭದಲ್ಲಿ ತೆಗೆದ ಫೋಟೋ ಎಂಬುದು ತಿಳಿದಿಲ್ಲ. ಯಾವ ಫಂಕ್ಷನ್, ಸಂದರ್ಭಯಾವುದು ಎಂಬುದನ್ನು ಜಮೀರ್ ಬಹಿರಂಗಪಡಿಸಿಲ್ಲ.

ಇಂದು ಮದ್ಯಾಹ್ನ 12 ಗಂಟೆಗೆ ಪೋಸ್ಟ್ ಮಾಡಿರುವ ಈ ಫೋಟೋ ಇಲ್ಲಿವರೆಗೆ 10 ಸಾವಿರಕ್ಕೂ ಹೆಚ್ಚು ವೀಕ್ಷಣೆ  ಪಡೆದಿದೆ.  ದೊಡ್ಡಮನೆಯ ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.