ವಿಜಯವಾಣಿ ಸುದ್ದಿಜಾಲ ಉಡುಪಿ
ಕನ್ನಡ ಸಿನಿಮಾದ ಖ್ಯಾತ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಉಡುಪಿಯಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಆರ್ಆರ್ಸಿ ಸಂಸ್ಥೆಗೆ ಇತ್ತೀಚೆಗೆ ಭೇಟಿ ನೀಡಿದ್ದರು.
ಬಹುಭಾಷೆಯಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಅವರ ನಿರ್ದೇಶನದ ವೀರ ಕಂಬಳ ಸಿನಿಮಾದ ಅಂತಿಮ ಹಂತದ ಹಿನ್ನೆಲೆಯಲ್ಲಿ ಕೆಲವು ದಾಖಲೆ ಪರಿಶೀಲಿಸಲು ಭೇಟಿ ನೀಡಿದ್ದರು. ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಆರ್ಆರ್ಸಿಯಲ್ಲಿರುವ ಅಪಾರ ಜ್ಞಾನಸಂಗ್ರಹದ ಪುಸ್ತಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದ ಪ್ರೊಡಕ್ಷನ್ ಮೆನೇಜರ್ ರಾಜೇಶ ಕುಡ್ಲ ಹಾಗೂ ಚಿತ್ರೀಕರಣ ತಂಡದ ಸದಸ್ಯರು ಇದ್ದರು. ಸಂಸ್ಥೆಯ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಹಾಗೂ ಆರ್ಆರ್ಸಿ ಸಹ ಸಂಶೋಧಕ ಡಾ. ಅರುಣ ಎಸ್.ಆರ್. ಅವರು ಸಂಸ್ಥೆಯ ಕಾರ್ಯಚಟುವಟಿಕೆ ಹಾಗೂ ಸಿರಿಸಂಪದ ದಾಖಲಾತಿ ಕೇಂದ್ರದ ಕುರಿತು ಮಾಹಿತಿ ನೀಡಿದರು.