ASHOK KUMAR 
ಜಿಲ್ಲೆ

ಜೂನ್ 01 ರಂದು ಕನ್ನಡ ಕಾರ್ಯಕರ್ತರ ಶಿಬಿರ

ರಾಯಚೂರು ಕನ್ನಡ ಅಭಿಮಾನಿಗಳಲ್ಲಿ ಭಾಷಾಪ್ರೇಮವನ್ನು ಮೈಗೂಡಿಸಲು ಕನ್ನಡ ಮಿತ್ರ ಕೂಟದಿಮದ ಜೂನ್.01 ರಂದು ಕನ್ನಡ ಕಾರ್ಯಕರ್ತರ ಶಿಬಿರವನ್ನು ನಗರದ ಕನ್ನಡಭವನದಲ್ಲಿ ಆಯೋಜಿಸಲಾಗಿದೆಂದು ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಕಾರ್ಯಕ್ರಮದಲ್ಲಿ ಅನೇಕ ಭಾಷಾತಜ್ಞರು, ಅಭಿಮಾನಿಗಳು ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ಯಾವುದೇ ವಯೋಮನದ ನಿರ್ಭಂದವಿಲ್ಲ.

ಕನ್ನಡ ಅಭಿಮಾನಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಗಡಿಯಾಚಿನ ಕನ್ನಡಿಗರು ಭಾಗವಹಿಸಬಹುದಾಗಿದೆ. ಕನ್ನಡದ ಕಳಕಳಿ ಉಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಗ್ರಾಮೀಣದ ಪ್ರದೇಶದ ಕನ್ನಡಿಗರು ಆಗಮಿಸಿ ಭಾಷೆ ಕುರಿತು ಚರ್ಚೆಯಲ್ಲಿ ಭಾಗಿಯಾಗಬೇಕಿದೆ. ಶಿಬಿರದಲ್ಲಿ ಭಾಗವಹಿಸುವವರು ಮೇ 29 ರೊಳಗೆ ರಾಮಣ್ಣ ಮ್ಯಾದರ(8453770157 ಅಥವಾ ರಾಮಲಿಂಗಪ್ಪ ಕುಣಸಿ( 9448910398) ಹತ್ತಿರ ನೊಂದಾಯಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಬಶೀರ ಅಹ್ಮದ ಹೊಸಮನಿ, ರಫೀಕ್ ಅಹ್ಮದ್, ರಾಮಲಿಂಗ ಇದ್ದರು.