ರಾಯಚೂರು ಕನ್ನಡಿಗರಾದ ನಾವು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದು, ಕನ್ನಡವನ್ನು ಬೆಳೆಸಿಕೊಂಡು ಹೋಗಬೇಕಾಗಿದೆ, ಕನ್ನಡದ ಉಳಿವಿಗಾಗಿ ಹೋರಾಟಗಳು ನಡೆಯಬೇಕೆಂದು ಕನ್ನಡ ಮಿತ್ರ ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಸಿ.ಕೆ. ಜೈನ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರು ಕನ್ನಡ ಮಿತ್ರ ಕೂಟದಿಂದ ಹಮ್ಮಿಕೊಂಡ ಕನ್ನಡ ಕಾರ್ಯಕರ್ತರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯ ಅಳಿವು ಉಳಿವು ನಮ್ಮ ಮೇಲಿದೆ, ಕನ್ನಡ ಭಾಷೆ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಮೂಲಕ ಕನ್ನಡತನವನ್ನು ಗಟ್ಟಿಗೊಳಿಸಿ ಉಸಿರಾಗಿಸಿಕೊಂಡು ಕನ್ನಡ ರಕ್ಷಣೆಗೆ ಮುಂದಾಗಬೇಕು. ಕನ್ನಡಕ್ಕೆ ಅವಮಾನಗಳು, ಕನ್ನಡಿಗರ ಮೇಲೆ ಹಲ್ಲೆ ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಿವೆ, ಸರ್ಕಾರ ಕನ್ನಡಕ್ಕೆ ಅಪಮಾನ ಮಾಡಿದವರ ವಿರುದ್ಧ ಕ್ರಮ ವಹಿಸಬೇಕಾಗಿದೆ ಎಂದರು.
ತಹಶಿಲ್ದಾರ್ ಸುರೇಶ ವರ್ಮಾ ಮಾತನಾಡಿ, ಜಿಲೆಯಲ್ಲಿ ಕನ್ನಡ ಭಾಷೆ, ಸಾಂಸ್ಕೃತಿಕ ಕೊಡುಗೆ ಹೆಚ್ಚಿದೆ. ಕನ್ನಡಕ್ಕಾಗಿ ಹೋರಾಟ, ಚಳುವಳಿಯ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಬೇಕಿದೆ, ಕನ್ನಡ ಇತಿಹಾಸ ಪುಟಗಳು ಇಂದು ಜಗತ್ತಿಗೆ ಕನ್ನಡ ಭಾಷೆ ಮಾದರಿಯಾಗಿದೆ. ಕನ್ನಡ ಭಾಷೆಯ ಕುರಿತು ರಾಜ ಮಹಾ ರಾಜರುಗಳ, ಕವಿ, ಲೇಖಕರು, ಕನ್ನಡಕ್ಕೆ ಸಾಕಷ್ಟು ಕೊಡುಗೆಗಳು ನೀಡಿದ್ದಾರೆ ಎಂದರು.
ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ ಕನ್ನಡದ ಉಲ್ಲೇಖ ಸೇರಿ ಅನೇಕ ಇತಿಹಾಸದ ಮಾಹಿತಿ ನೀಡಿದೆ, ನಾವು ಹುಟ್ಟಿನಿಂದ ಕನ್ನಡತವನ್ನು ಬೆಳೆಸಿಕೊಂಡು ಶಿಬಿರದ ಮೂಲಕ ಕನ್ನಡ ಕಟ್ಟುವ ಕೆಲಸ ನಿರಂತರ ಪ್ರಕ್ರಿಯೆಯಾಗಿರಲಿ ಎಂದು ತಿಳಿಸಿದರು. ಅರ್ಥ ಪೂರ್ಣ ಕೆಲಸಕ್ಕೆ ಪ್ರತಿಯೊಬ್ಬರು ಸಾಥ ನೀಡಬೇಕು, ಆಲೂರು ವೆಂಕಟರಾಯರು ಕನ್ನಡ ಗತ ವೈಭವನನ್ನು ಸಾರಿದ್ದಾರೆ, ಕನ್ನಡಕ್ಕಾಗಿ ಸಾಕಷ್ಟು ಸಾಹಿತಿಗಳು, ಕವಿಗಳು, ಪಂಪ, ರಾಘವಾಂಕ, ಕುವೆಂಪು ಸೇರಿದಂತೆ ಅನೇಕ ಕವಿಗಳು ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಕನ್ನಡ ಕಟ್ಟುವ ಬೆಳೆಸುವ ಉದ್ದೇಶದಿಂದ ಮಿತ್ರ ಕೂಟವನ್ನು ರಚನೆ ಮಾಡಿಕೊಂಡು ಕನ್ನಡ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಿದ್ದನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ವೀರ ಹನುಮಾನ, ಮ್ಯಾದರ್ ಲಲಿತಾ ಪ್ರತಿಷ್ಠಾನದ ಅಧ್ಯಕ್ಷ ಹೆಚ್.ಹೆಚ್. ಮ್ಯಾದರ್, ಜಿಲ್ಲಾ ಕಾರಾಗೃಹ ಅಧೀಕ್ಷಕಿ ಅನಿತಾ, ಕೃಷ್ಣ ಮಂಡಲ ಕ್ಷೇತ್ರ ಶಿಕ್ಷಣಾಧಿಕಾರಿ ನಿಜಾಮುದ್ದಿನ್, ರಫಿಕ್ ಅಹ್ಮದ್, ರಾಮಲಿಂಗಪ್ಪ ಕುಣ್ಸಿ, ಬಶೀರ್ ಅಹ್ಮದ್ ಹೊಸಮನಿ, ರಾಮಣ್ಣ ಮ್ಯಾದರ್ ಸೇರಿದಂತೆ ಕಾರ್ಯಕರ್ತರು
ಭಾಗವಹಿಸಿದ್ದರು.