ಜಿಲ್ಲೆ

ಭಾಷೆ ಸಂಸ್ಕೃತಿಯ ಪ್ರತೀಕ

ಎ. ಆರ್. ರಘುರಾಮ

ಕೊಳ್ಳೇಗಾಲ : ಪಟ್ಟಣದ ಜೆಎಸ್‌ಎಸ್ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ 68ನೇ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಸಾಹಿತ್ಯದ ನಡಿಗೆ ಶಾಲಾ ಕಾಲೇಜುಗಳ ಕಡೆಗೆ ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ ,ಸಾಹಿತ್ಯ ಕೇವಲ ಸಂತೋಷಕ್ಕಾಗಿ ಅಲ್ಲ. ಇದು ನಾಡಿನ ಸಂಸ್ಕೃತಿಯ ಪ್ರತೀಕವೂ ಆಗಿದೆ ಎಂದರು.
ಸಾಹಿತ್ಯ ರಚನೆಗೆ ಲೋಕದ ಬದುಕೇ ಕಾರಣ. ಬದುಕನ್ನು ಪರಿವರ್ತಿಸಿ ಸಾರ್ಥಕತೆಗೆ ಕರೆದೊಯ್ಯುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.
ಕನ್ನಡ ನಾಡು ಶ್ರೀಗಂಧದ ಬೀಡು. ಸಂಸ್ಕೃತಿ ಮತ್ತು ಇತಿಹಾಸದ ನೆಲೆ. ವಿವಿಧ ಕಾಲಘಟ್ಟದಲ್ಲಿ ಕನ್ನಡವಾಗಿ ರೂಪಾಂತರ ಗೊಂಡು ಸುಂದರ ಸಾಹಿತ್ಯ ಹೊರ ಹೊಮ್ಮಿದೆ ಎಂದರು. ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ ಪ್ರಭು, ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ಮಹದೇವಸ್ವಾಮಿ, ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಹೇಮಂತ್, ಪ್ರಾಧ್ಯಾಪಕ ನಾಗಭೂಷಣ್, ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಶಿವಸ್ವಾಮಿ ಇತರರು ಇದ್ದರು.